ಬೆಂಗಳೂರು : RSS ಬ್ಯಾನ್ ಮಾಡೋಕೆ ಇಂದಿರಾ ಗಾಂಧಿ ಕೈಯಲ್ಲೇ ಆಗಿಲ್ಲ ಇನ್ನ ನಿಮ್ಮ ಕೈಲಿ ಆಗುತ್ತಾ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿ ನಡೆದ RSS ಪಥಸಂಚಲನದ ಬಳಿಕ ಮಾತನಾಡಿದ ಅವರು, ಆರ್‌ಎಸ್‌ಎಸ್ ಬ್ಯಾನ್ ಮಾಡಲು ಮೂರು ಬಾರಿ ಪ್ರಯತ್ನ ಮಾಡಿದರೂ ಇಂದಿರಾ ಗಾಂಧಿ ಕೈಯಲ್ಲೇ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರೇ ಆರ್‌ಎಸ್‌ಎಸ್ ದೇಶದ ಬಹುತೇಕ ರಾಜ್ಯಪಾಲರು ಆರ್‌ಎಸ್‌ಎಸ್‌ನಿಂದ ಬಂದವರು. ಇಡೀ ದೇಶವೇ ಆರ್‌ಎಸ್‌ಎಸ್ ಇದ್ದಾಗ ಬ್ಯಾನ್ ಮಾಡೋಕೆ ಸಾಧ್ಯವಾ? ಕಾಂಗ್ರೆಸ್ ರಾಷ್ಟ್ರೀಯ ಪಾರ್ಟಿ ಆಗಿ ಉಳಿದಿಲ್ಲ. ರಾಹುಲ್ ಗಾಂಧಿ ಆರ್‌ಎಸ್‌ಎಸ್ ಬಗ್ಗೆ ಮಾತಾನಾಡುತ್ತಾರೆ ಅಂದರೆ ಅವರಿಗೆ ಭಾರತದ ಇತಿಹಾಸ ಗೊತ್ತಿಲ್ಲ. ಇಂತಹವರಿಗೆ ಆರ್‌ಎಸ್‌ಎಸ್ ಬಗ್ಗೆ ಮಾತಾಡುವ ಅರ್ಹತೆ ಇಲ್ಲ. ರಾಷ್ಟ್ರ ಪ್ರೇಮ ಮೂಡಿಸುವ ಸಂಸ್ಥೆ ಆರ್‌ಎಸ್‌ಎಸ್. ಇವರಿಗೆ ರಾಷ್ಟ್ರಪ್ರೇಮ ಇಲ್ಲ, ಕಾಂಗ್ರೆಸ್ಗೆ ವೋಟಿನ ಪ್ರೇಮ ಮಾತ್ರ ಇದೆ” ಎಂದು ವಾಗ್ದಾಳಿ ನಡೆಸಿದ್ರು.
ಇನ್ನು ಡಿಕೆಶಿ-ಮುನಿರತ್ನ ಜಟಾಪಟಿ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರದ ದುಡ್ಡಿನಲ್ಲಿ ಮಾಡುತ್ತಿರುವ ಕಾರ್ಯಕ್ರಮ ಅದು. ಸರ್ಕಾರಿ ಕಾರ್ಯಕ್ರಮ. ಲೋಕಲ್ MLA, MPನ ಕರೆಯದೇ ಅವಮಾನ ಮಾಡಿದ್ದಾರೆ. ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ಶಾಸಕರಿಗೆ ಗೌರವ ಕೊಡದೇ ಅವರ ಮೇಲೆ ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇದು ಕಾಂಗ್ರೆಸ್ನ ಸಂಸ್ಕೃತಿ ಹಾಗೂ ಗೂಂಡಾಗಿರಿ ತೋರಿಸುತ್ತದೆ. ಎರಡು ವರ್ಷ ಮಾತ್ರ ಇರ್ತೀರ ನೀವು, ಯಾಕೆ ಗೂಂಡಾಗಿರಿ ಮಾಡ್ತೀರ?. ಕಾಂಗ್ರೆಸ್ ಔಟ್ ಗೋಯಿಂಗ್ ಪಾರ್ಟಿ ಅಂತ ಜನ ತೀರ್ಮಾನ ಮಾಡಿದ್ದಾರೆ” ಎಂದು ವ್ಯಂಗ್ಯವಾಡಿದರು.