ಸಿಎಂ – ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಬೀಗತನ ಮಾಡಿದಂತೆ: ರಾಜಣ್ಣ ಲೇವಡಿ

ತುಮಕೂರು : ಸಿಎಂ-ಡಿಸಿಎಂ ಬ್ಯಾಕ್ ಟು‌ ಬ್ಯಾಕ್ ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎನ್‌.ರಾಜಣ್ಣ, ಬ್ರೇಕ್ ಫಾಸ್ಟ್ ಮೀಟಿಂಗ್ ಬೀಗತನ ಮಾಡಿದಂತೆ ಎಂದು ಲೇವಡಿ ಮಾಡಿದ್ದಾರೆ.

ತುಮಕೂರಿನಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಮೊದಲು ಒಂದು ಕಡೆ ಹೆಣ್ಣು ನೋಡೋಕೆ ಬರ್ತಾರೆ. ಆ ಮೇಲೆ ಗಂಡು ನೋಡೋಕೆ ಬರ್ತಾರೆ. ಆ ರೀತಿಯಾಗಿದೆ ಈ ಬ್ರೇಕ್ ಫಾಸ್ಟ್ ಮೀಟಿಂಗ್ ಎಂದು ಟೀಕಿಸಿದರು.

ಇದನ್ನೂ ಓದಿ : ಸಿದ್ದರಾಮಯ್ಯ 30 ತಿಂಗಳ ನಂತರವಾದ್ರು ಅಧಿಕಾರ ಬಿಡಬಹುದು, ಅಥವಾ ಅದಕ್ಕೂ ಮೊದಲೇ : ಸತೀಶ್ ಜಾರಕಿಹೊಳಿ

ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಹೋಗಿ ಇಡ್ಲಿ ವಡೆ ಕೇಸರಿಬಾತ್‌ ಸೇವಿಸಿ ಬಂದಿದ್ದರೆ, ಮಂಗಳವಾರ ಡಿಕೆ ಶಿವಕುಮಾರ್‌ ಮನೆಗೆ ಸಿಎಂ ಸಿದ್ದರಾಮಯ್ಯ ಹೋಗಿ ನಾಟಿಕೋಳಿ ಖಾದ್ಯಗಳನ್ನು ಸೇವಿಸಿ ಬಂದಿದ್ದರು. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಹಲವು ಚರ್ಚೆಗಳಿಗೆ ಆಸ್ಪದ ನೀಡಿತ್ತು.

ಇನ್ನು ಪವರ್‌ ಶೇರಿಂಗ್‌ ಬಗ್ಗೆ ಮಾತನಾಡಿದ ಕೆ.ಎನ್‌.ರಾಜಣ್ಣ, ಇರೋದು ಏನಿದೆಯೋ ಅದೇ ಮುಂದುವರಿದುಕೊಂಡು ಹೋಗುತ್ತೆ. ಯಾವುದೇ ರಿವರ್ಸ್ ಆಗಲ್ಲ. ಈ ಹಳ್ಳಿಗಳಲ್ಲಿ ಶಾಂತಿ ಆಗಬೇಕು ಅಂದ್ರೆ ಕುರಿ ಕೋಳಿ ಬಲಿ ಕೊಡ್ತಾರೆ. ಅದೇ ರೀತಿ ಎರಡು ಮನೆಯಲ್ಲಿ ಶಾಂತಿ ಆಗಿದೆ. ಬದಲಾವಣೆ ಇಲ್ಲ ಅಂತ ನಾವು ಅಂದುಕೊಂಡಿದ್ದೇವೆ. ಬದಲಾವಣೆ ಇದ್ರೆ ಹೈಕಮಾಂಡ್ ಹೇಳುತ್ತಾರೆ. ಸಚಿವ ಸಂಪುಟ ವಿಸ್ತರಣೆ ಬೆಳಗಾವಿ ಅಧಿವೇಶನದ ನಂತರ ಆಗುತ್ತೆ ಎಂದರು.

ಬಳಿಕ ದಲಿತ ಸಿಎಂ ಪರಮೇಶ್ವರ್ ಆಗಬೇಕೆಂಬ ಕೂಗು ಕೇಳಿಬಂದಿರುವ ವಿಚಾರವಾಗಿ ಮಾತನಾಡಿದ ಅವರು, ಅನಿವಾರ್ಯವಾಗಿ ಸಿದ್ದರಾಮಯ್ಯ ನವರನ್ನು ಪದಚ್ಯುತಿ ಮಾಡಿದರೆ ದಲಿತ ಸಿಎಂ ಪರಮೇಶ್ವರ್ ಆಗಬೇಕು. ಎಂದರು.

ತಮ್ಮ ಪುತ್ರ ರಾಜೇಂದ್ರ ಬಿಜೆಪಿ ನಾಯಕರನ್ನು ಭೇಟಿ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜೇಂದ್ರ ಸ್ಕ್ರೀಪ್ಕೋದಲ್ಲಿ ಹಿರಿಯ ನಿರ್ದೇಶಕನಾಗಿದ್ದಾನೆ. ಸ್ಕ್ರೀಪ್ಕೋ ಇಸ್ಕೋದಲ್ಲಿ ಆರ್ಟಿಫಿಸಿಯಲ್ ಮೆನ್ಯೂರ್ ಮಾಡಬೇಕಾಗಿದೆ. ಆ ಎರಡು ಸಮಿತಿಗಳು ಏಷ್ಯಾ ಖಂಡದಲ್ಲಿಯೇ ದೊಡ್ಡ ಸಹಕಾರಿ ಸಂಸ್ಥೆಗಳು. ಇದೆಲ್ಲವೂ ಕೇಂದ್ರ ಸಹಕಾರಿ ಸಚಿವರ ಅಡಿಯಲ್ಲಿ ಬರುತ್ತವೆ. ಇದರ ಬಗ್ಗೆ ಚರ್ಚೆಗಳಿದ್ದಾಗ ಅವರೊಬ್ಬರೇ ಅಲ್ಲ ಇತರೆ ಎಲ್ಲಾ ನಿರ್ದೇಶಕರು ಹೋಗ್ತಾರೆ. ಅಮಿತ್ ಶಾ ಕೂಡಾ ಸಭೆ ಕರೆಯುತ್ತಿರುತ್ತಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸೋದು ಬೇಡ ಎಂದರು.

Leave a Reply

Your email address will not be published. Required fields are marked *