ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ – ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಇಡೀ ರಾಜ್ಯದ ಜನತೆಯ ಗಮನ ಸೆಳೆಯುತ್ತಿದೆ. ವಿರೋಧ ಪಕ್ಷಗಳು, ಸಿಎಂ ಕುರ್ಚಿ ಕದನ ಮುಂದುವರಿದಿದೆ. ಈ ಮೀಟಿಂಗ್ ಅನ್ನು ಒಗ್ಗಟ್ಟು ಪ್ರದರ್ಶಿಸುವ ನಾಟಕ ಎಂದು ಟೀಕಿಸುತ್ತಿದ್ದಾರೆ.
ಇನ್ನು ಸಿಎಂ ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಅನ್ನ ಜೆಡಿಎಸ್ ಅಣಕಿಸಿದೆ. ಇದು ಸಿಎಂ ಸಿದ್ದರಾಮಯ್ಯನವರ ಸೆಟ್ಲ್ ಮೆಂಟ್ ರಾಜಕಾರಣ ಎಂದು ಟೀಕಿಸಿದೆ.
ಸಿದ್ದರಾಮಯ್ಯನವರಿಗೆ ಸಿಎಂ ಕುರ್ಚಿ ಬಿಡಲು ಮನಸ್ಸು ಒಪ್ಪುತ್ತಿಲ್ಲ, ಅದಕ್ಕಾಗಿ ಡಿ.ಕೆ.ಶಿವಕುಮಾರ್ ಜೊತೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ಸಂಪುಟ ಪುನಾರಚನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳೋಣ ಎಂದು ಒತ್ತಡ ಹೇರಲು ನೋಡುತ್ತಿದ್ದಾರೆ. ಇವರಿಬ್ಬರದ್ದು ಕೇವಲ ನಾಟಕವಷ್ಟೆ, ಹೊರಗೆ ಮಾಧ್ಯಮಗಳ ಮುಂದೆ ಅಣ್ತಮ್ಮನಂತೆ ತೋರಿಸಿಕೊಳ್ಳುತ್ತಿದ್ದಾರಷ್ಟೆ ಎಂದು ಟ್ವೀಟ್ ಮಾಡಿ ಸಿದ್ದರಾಮಯ್ಯರ ಕಾಲೆಳೆದಿದೆ.
ಅಲ್ಲದೇ ಡಮ್ಮಿ ಸಿಎಂ ಸಿದ್ದರಾಮಯ್ಯ ಕುರ್ಚಿ ಆಸೆಗೆ ಡಿಕೆಶಿ ಜೊತೆ ಸೆಟಲ್ಮೆಂಟ್ಗೆ ಬಂದ ಸಿದ್ದಹಸ್ತ ! ಸಿದ್ದರಾಮಯ್ಯ : ಶಿವಕುಮಾರ್ ಈಗ್ಲೂ ನೀನೇ ಸೂಪರ್ ಸಿಎಂ ಕಣಯ್ಯ. ನೀನೆಷ್ಟೆ ಕಮಿಷನ್ ತಗೊಂಡ್ರು ನಾನ್ಯಾವತ್ತಾದ್ರೂ ಅಡ್ಡಿ ಮಾಡಿದಿನಾ?
ಡಿಕೆಶಿ : ಅದು ಹಾಗಲ್ಲ ಸರ್. ನೀವ್ ಕೊಟ್ಟ ಮಾತು..
ಸಿದ್ದರಾಮಯ್ಯ : ಏಯ್ ಕೇಳಪ್ಪ ಇಲ್ಲಿ. ಸಂಪುಟದಲ್ಲಿ ನೀನು ಯಾರ್ ಹೇಳ್ತೀಯೋ ಅವ್ರೆ ಮಂತ್ರಿ. ಈಗ ನಡೀ.. ಪ್ರೆಸ್ ಮುಂದೆ ನಾವಿಬ್ಬರು ಅಣ್ತಮ್ಮ ಅಂತ ಹೇಳಿದ್ಯಲ್ಲ. ಹಂಗೇ ನಡ್ಕೋ. ಇದಷ್ಟೇ ಇವರಿಬ್ಬರ ನಡುವಿನ Break _ Fast ಮೀಟಿಂಗ್ ಕಥೆ.. ಎಂದು ಅವರ ಸಂಭಾಷಣೆಯನ್ನ ಟ್ವೀಟ್ ಮಾಡಿದೆ.