‘ಸಂಪುಟ ಪುನರ್ ರಚನೆಯಾದ್ರೆ ಡಿಕೆಶಿಯನ್ನ ಸಿಎಂ ಮಾಡಬಾರ್ದು ಅಂತ ಏನಿಲ್ಲವಲ್ಲ’

ಮಾಗಡಿ : ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿದೆ. ಮೇಲಿಂದ ಮೇಲೆ ಸಿಎಂ ಡಿಸಿಎಂ ದೆಹಲಿ ವಿಸಿಟ್ ಮಾಡ್ತಿದ್ದಾರೆ. ಈ ನಡುವೆಯೇ ಮಾಗಡಿ ಶಾಸಕ ಹೆಚ್.ಸಿ.ಬಾಕೃಷ್ಣ ಸ್ಫೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ಆದ ಮೇಲೆ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಬಾರದು ಅಂತ ಏನಿಲ್ಲವಲ್ಲ? ಯಾವ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕು ಎಂಬುದು ಹೈಕಮಾಂಡ್ ಗೆ ಗೊತ್ತಿದೆ. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳುವ ಮೂಲಕ ಮತ್ತೆ ಚರ್ಚೆ ಹುಟ್ಟು ಹಾಕಿದ್ದಾರೆ.

ಇದನ್ನೂ ಓದಿ : ಪೋಕ್ಸೋ ಕೇಸ್‌, ಕೋರ್ಟ್‌ಗೆ ಹಾಜರಾಗುವಂತೆ ಮಾಜಿ ಸಿಎಂ ಬಿಎಸ್‌ವೈಗೆ ಸಮನ್ಸ್‌ ಜಾರಿ

ಇನ್ನು ಸಿಎಂ ಸ್ಥಾನಕ್ಕಾಗಿ ಹೋರಾಟ ಮಾಡುತ್ತಿರುವ ಡಿ.ಕೆ.ಶಿವಕುಮಾರ್, ಸಿಎಂ ಸ್ಥಾನ ಸಿಗದೆ ಹೋದರೆ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬಾಲಕೃಷ್ಣ ಅವರು, ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯುವ ಮಾತೇ ಇಲ್ಲ. ಇವೆಲ್ಲಾ ಬಿಜೆಪಿಯವರು ಹುಟ್ಟುಹಾಕಿರುವ ಊಹಾಪೋಹಗಳು. ನಾನು ಶಿಸ್ತಿನ ಸಿಪಾಯಿ. ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ ಎಂಬ ಮಾತನ್ನು ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಅವರಿಗೆ ಪಕ್ಷ ಉತ್ತಮ ಸ್ಥಾನಮಾನ ನೀಡಲಿದೆ ಎಂಬ ವಿಶ್ವಾಸ ನಮಗೆ ಇದೆ. ಯಾರಾದ್ರೂ ನಮ್ಮ ಪಕ್ಷಕ್ಕೆ ಬರಲಿ ಎಂದು ಬಿಜೆಪಿಯವರು ಈ ರೀತಿಯ ಗೊಂದಲಗಳನ್ನು ಮೂಡಿಸುತ್ತಾ ಇದ್ದಾರೆ. ನಮ್ಮ ಸರ್ಕಾರವನ್ನು ಉರುಳಿಸಬೇಕು ಎಂಬುದು ಬಿಜೆಪಿಯ ಉದ್ದೇಶವಾಗಿದೆ ಎಂದು ಬಾಲಕೃಷ್ಣ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *