ಬಾಗಲಕೋಟೆ : ಬೆಂಬಲ ಬೆಲೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದೆ. ಒಂದು ಟನ್ ಕಬ್ಬಿಗೆ ₹3500 ರೂಪಾಯಿ ಬೆಲೆ ನೀಡುವಂತೆ ಆಗ್ರಹಿಸಿ ನಡೆಸಿರುವ ಬಾಗಲಕೋಟೆ ಕಬ್ಬು ಬೆಳಗಾರರ ಹೋರಾಟ ಮುಂದುವರೆದಿದೆ.
ಮುಧೋಳ ತಾಲೂಕಿನ ಸೈದಾಪುರ ಗ್ರಾಮದ ಸಮೀರವಾಡಿಯ ಗೋದಾವರಿ ಕಾರ್ಖಾನೆ ಬಳಿ ಸಾಲಾಗಿ ನಿಲ್ಲಿಸಿದ್ದ 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ ಹಚ್ಚಲಾಗಿದೆ. ಇದೇ ವೇಳೆ ಕಲ್ಲೂ ತೂರಾಟ ಉಂಟಾಗಿಉಂಟಾಗಿದೆ.
ಮುಧೋಳದಿಂದ ಸಮೀರವಾಡಿ ತೆರಳುವ ಮಧ್ಯೆ ರೈತರು ಕಬ್ಬು ತುಂಬಿದ ಟ್ರಾಕ್ಟರ್ ಮಗುಚಿ ಹಾಕಿ ಬೆಂಕಿ ಹಚ್ಚಿದ್ದಾರೆ. ಈ ಟ್ರಾಕ್ಟರ್ ಹೊತ್ತಿ ಉರಿಯುತ್ತಿದ್ದಂತೆ ರೈತರು ನೇರವಾಗಿ ಸಮೀರವಾಡಿ ಕಾರ್ಖಾನೆಗೆ ನುಗ್ಗಿದ್ದಾರೆ. ಕಾರ್ಖಾನೆ ಆವರಣದಲ್ಲಿದ್ದ ಕಬ್ಬು ತುಂಬಿದ ಟ್ರಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಇಡೀ ಪ್ರದೇಶ ಬೆಂಕಿಯ ಜ್ವಾಲೆಯಲ್ಲಿ ಸುಟ್ಟ ಕರಕರಲಾಗಿದೆ.
ರೈತರು ₹3,300 ರೂಪಾಯಿ ಬೆಂಬಲ ಬೆಲ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇತ್ತ ಕಾರ್ಖಾನೆ ಮಾಲೀಕರು ₹3,250 ರೂಪಾಯಿ ನೀಡುವುದಾಗಿ ಭರವಸೆ ನೀಡಿದೆ. ಇನ್ನುಳಿದ ₹50 ರೂಪಾಯಿ ತಡವಾಗಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ₹3,300 ರೂಪಾಯಿ ಒಟ್ಟು ಮೊತ್ತ ನೀಡುವಂತೆ ರೈತರು ಪಟ್ಟು ಹಿಡಿದು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
20ಕ್ಕೂ ಹೆಚ್ಚು ಟ್ರಾಕ್ಟರ್ ಹೊತ್ತಿ ಉರಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸು ಕಾರ್ಯದಲ್ಲಿ ತೊಡಗಿದೆ. ಆದರೆ ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ಬೆಂಕಿ ಜ್ವಾಲೆ ನಿಲ್ಲುತ್ತಿಲ್ಲ. ಹೀಗಾಗಿ ಟ್ರಾಕ್ಟ್ ಹಾಗೂ ಕಬ್ಬು ಸುಟ್ಟು ನಾಶವಾಗಿದೆ. ನೂರಾರು ಟನ್ ಕಬ್ಬು ನಾಶವಾಗಿದೆ. ಅಪಾರ ನಷ್ಟ ಸಂಭವಿಸಿದೆ.