ಬಿಹಾರದಲ್ಲಿ ಕಾಂಗ್ರೆಸ್​​ಗೆ ಭಾರೀ ಮುಖಭಂಗ, ಸೋಲು ಖಚಿತವಾಗ್ತಿದ್ದಂತೆ ವೋಟ್ ಚೋರಿ ಎಂದ ಕಾಂಗ್ರೆಸ್

ಬಿಹಾರ : ಇನ್ನೇನು ಕೆಲವೇ ಗಂಟೆಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ಸ್ಪಷ್ಟ ಫಲಿತಾಂಶ ಹೊರ ಬೀಳಲಿದೆ. ಎನ್‌ಡಿಎ ಅಥವಾ ಮಹಾಮೈತ್ರಿಕೂಟ ಇವರಿಬ್ಬರಲ್ಲಿ ಬಿಹಾರದಲ್ಲಿ ಯಾರು ಸರ್ಕಾರ ರಚಿಸುತ್ತಾರೆ? ಎಂಬ ಕುತೂಹಲಕ್ಕೆ ಈಗಾಗಲೇ ತೆರೆ ಬಿದ್ದಿದೆ. 203 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿ ಬಿಹಾರ್ ಬಾದ್‌ಶಾ ಆಗಿದೆ. ಆದರೂ ಇನ್ನೂ ಕೆಲ ಸಮಯ ಅಧಿಕೃತ ಘೋಷಣೆಗೆ ಕಾಯಬೇಕಿದೆ.

ಇತ್ತ 10ನೇ ಬಾರಿಗೆ ನಿತೀಶ್‌ ಕುಮಾರ್ ಸಿಎಂ ಆಗ್ತಾರಾ ಅನ್ನೋದು ಕಾದು ನೋಡಬೇಕಿದೆ. ಅತ್ತ ಹಿನ್ನಡೆ ಅನುಭವಿಸರೋ ಮಹಾಘಟಬಂಧನ್ ವೋಟ್ ಚೋರಿ ಅನ್ನೋ ದಾಳ ಉರುಳಿಸ್ತಿದೆ. ಮೊದಲ ಹಂತದ ಮತದಾನ ನವೆಂಬರ್ 6 ರಂದು ಮತ್ತು ಎರಡನೇ ಹಂತದ ಮತದಾನ ನವೆಂಬರ್ 11 ರಂದು ನಡೆದಿತ್ತು. ಈ ಚುನಾವಣೆಯಲ್ಲಿ ದಾಖಲೆಯ 67.13 ಪ್ರತಿಶತ ಮತದಾನವಾಗಿದೆ, ಇದು 1951 ರ ನಂತರದ ಅತ್ಯಧಿಕ ಮತದಾನವಾಗಿದೆ.

ಬಿಹಾರದಲ್ಲಿ ಒಟ್ಟು 243 ವಿಧಾನಸಭಾ ಸ್ಥಾನಗಳಿವೆ. 243 ಸ್ಥಾನಗಳ ವಿಧಾನಸಭಾ ಚುನಾವಣೆಯಲ್ಲಿ ಬಹುಮತಕ್ಕೆ 122 ಸ್ಥಾನಗಳು ಬೇಕಾಗುತ್ತವೆ. ಹೆಚ್ಚಿನ ಎಕ್ಸಿಟ್ ಪೋಲ್ಸ್ ಎನ್‌ಡಿಎ ಗೆಲುವಿನ ಮುನ್ಸೂಚನೆ ನೀಡಿದ್ದವು. ಅದರಂತೆ ರಿಸಲ್ಟ್‌ನಲ್ಲೂ ಎನ್‌ಡಿಎ ಮ್ಯಾಜಿಕ್‌ ನಂಬರ್‌ ದಾಟಿ ಮುನ್ನಡೆ ಪಡೆದುಕೊಂಡಿದೆ. ಇದೀಗ ಬಿಜೆಪಿ ಮೈತ್ರಿಪಕ್ಷಗಳು ಬಿಹಾರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ಚಿತ್ರಣ ಹೊರಬಿಳಲಿದೆ.

Leave a Reply

Your email address will not be published. Required fields are marked *