ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಪಿಯುಸಿ‌ ಫೇಲ್ ಆಗಿದ್ದಾನೆ, ಅವನೊಬ್ಬ ದಡ್ಡ ಈ ಸರ್ಕಾರವೂ ದಡ್ಡ ಸರ್ಕಾರ‌ : ಹೆಚ್.ವಿಶ್ವನಾಥ್

ಕೊಪ್ಪಳ : ರಾಜ್ಯದಲ್ಲಿ ಶಿಕ್ಷಣ ಮೌಲ್ಯಗಳು ಕುಸಿದಿವೆ. ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಪಿಯುಸಿ‌ ಫೇಲ್ ಆಗಿದ್ದಾನೆ, ಅವನೊಬ್ಬ ದಡ್ಡ. ಕಾಂಗ್ರೆಸ್ ಸರ್ಕಾರವೂ ದಡ್ಡ ಸರ್ಕಾರ‌ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಮಕ್ಕಳ ಶಿಕ್ಷಣದ ಮೌಲ್ಯ ಕುಸಿದಿದೆ. ಮಗುವನ್ನ ದಡ್ಡ ಎಂದು ಹೇಳುವ ಮಧು ಬಂಗಾರಪ್ಪನೇ ದಡ್ಡ ಮಂತ್ರಿ.. ಸಿದ್ದರಾಮಯ್ಯನಿಗೆ ಎನ್ಇಪಿ ಬಗ್ಗೆ ಏನು ಗೊತ್ತಿದೆ?. ಕೇಂದ್ರ ಸರ್ಕಾರವನ್ನ ವಿರೋಧಿಸಲು ಎನ್ಇಪಿ ವಿರೋಧ ಮಾಡ್ತಿದ್ದಾರೆ. ಸಿದ್ದರಾಮಯ್ಯನಿಗೆ ಎನ್ಇಪಿ ಹಾಗೂ ಎಸ್ಇಪಿನೂ ಗೊತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರಿಗೆ ನೆಮ್ಮದಿಯಿಲ್ಲ. ಅನ್ನಭಾಗ್ಯ ಯೋಜನೆಯಿಂದ ಜನರು ನೆಮ್ಮದಿಯಿಂದ ಇದ್ದಾರೆ ಎನ್ನುವುದು ತಪ್ಪು.

ಇದನ್ನೂ ಓದಿ : ದೊರೆ ಮಾಡಿದ್ದಕ್ಕೆ ದಂಡ ಇಲ್ಲ; ರಾಹುಲ್ ಗಾಂಧಿ ವಿರುದ್ಧ ರಾಜಣ್ಣ ಅಸಮಾಧಾನ

ರಾಜ್ಯದಲ್ಲಿ ಅರಾಜಕತೆ ನಡೆದಿದೆ. ಈ ಸರ್ಕಾರದಲ್ಲಿ ಆಯೋಗ್ಯರೇ ಹೆಚ್ಚಾಗಿದ್ದಾರೆ. ರಾಜ್ಯದಲ್ಲಿ ಉತ್ತಮ ಆಡಳಿತವೂ ಇಲ್ಲ, ಅಭಿವೃದ್ಧಿಯೂ ಇಲ್ಲ. ಇದೊಂದು ದಡ್ಡ ಸರ್ಕಾರ, ಶಿಕ್ಷಣ ಮಂತ್ರಿನೇ ಪಿಯುಸಿ ಫೇಲ್ ಆಗಿದ್ದಾನೆಂದು ಕಿಡಿಕಾರಿದ್ದಾರೆ.

ಬಹಳ ವರ್ಷದಿಂದ ನಾನು ಕಾಂಗ್ರೆಸ್‌ ಪಕ್ಷದಲ್ಲಿದ್ದವನು. ಮಾಜಿ ಸಿಎಂ ಡಿ.ದೇವರಾಜ ಅರಸು ಅವರು ನನ್ನ ಬೆಳೆಸಿದ್ದು. ಕಾಂಗ್ರೆಸ್‌ನೇ ಅಹಿಂದ, ಸಿದ್ದರಾಮಯ್ಯನಿಂದ ಅಹಿಂದ ಅಲ್ಲ. ಸಿದ್ದರಾಮಯ್ಯನಂಥ ನೀಚ ವಂಚಕ ಇನ್ನೊಬ್ಬನಿಲ್ಲ. ಆತನಿಗೆ ಅಧಿಕಾರ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಆದರೆ ಅದೇ ಸಿದ್ದರಾಮಯ್ಯನೇ ಕಾಂಗ್ರೆಸ್‌ಗೆ ಬೀಗ ಹಾಕಿ ಹೋಗ್ತಾನೆ ಎಂದು ವಿಶ್ವನಾಥ್‌ ಟೀಕಿಸಿದ್ದಾರೆ.

ಮುಸ್ಲೀಮರ‌ ಮಧ್ಯೆ ತಂದಿಟ್ಟಿದ್ದೇ ಸಿದ್ದರಾಮಯ್ಯ..!

ಅಲ್ಪಸಂಖ್ಯಾತರ ಮಧ್ಯೆ ಗಲಾಟೆ ಹಚ್ಚಿದ್ದೇ ಸಿದ್ದರಾಮಯ್ಯ. ದಾವಣಗೆರೆಯಲ್ಲಿ ಮುಸ್ಲಿಂರಿಗೆ ಸೀಟು ಕೊಡಬೇಕಾಗಿತ್ತು. ಆದರೆ ಸಿದ್ದರಾಮಯ್ಯ ಒಬ್ಬ‌ ಮೋಸಗಾರ, ಸುಳ್ಳುಗಾರ. ಅಲ್ಪಸಂಖ್ಯಾತರನ್ನ ಹಾಳು ಮಾಡಿದ್ದೇ ಸಿದ್ದರಾಮಯ್ಯ. ಕಾಂಗ್ರೆಸ್-ಬಿಜೆಪಿ ನಡುವೆ ಒಳ ಒಪ್ಪಂದವಿದೆ. ಬಿಜೆಪಿ-ಜೆಡಿಎಸ್‌ನಲ್ಲಿ ಇದು ಇಲ್ಲ. ಬಿ.ವೈ.ವಿಜಯೇಂದ್ರನನ್ನ ಗೆಲ್ಲಿಸಿದ್ದು ಇದೇ ಸಿದ್ದರಾಮಯ್ಯ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗೆಲುವಿಗೆ ಕಾರಣವಾಗಿದ್ದು ಇದೇ ಕಾಂಗ್ರೆಸ್. ಸಿದ್ದರಾಮಯ್ಯ ಒಬ್ಬ ರಾಜಕೀಯ ಮೋಸಗಾರ. ಅಧಿಕಾರ ಹಂಚಿಕೆ ಬಗ್ಗೆ ಬಿಜೆಪಿ ಜೊತೆಗೆ ಒಪ್ಪಂದವಾಗಿದೆ ಎಂದು ವಿಶ್ವನಾಥ್‌ ಆರೋಪಿಸಿದರು.

ಕಾಂಗ್ರೆಸ್ ಪಕ್ಷದ ಗೆಲುವಿಗೆ ಡಿ.ಕೆ.ಶಿವಕುಮಾರ್ ಪ್ರಮುಖ ಪಾತ್ರ ಮತ್ತು ಶ್ರಮವಿದೆ. ಹೀಗಾಗಿ ಒಪ್ಪಂದದ ಪ್ರಕಾರ ಸಿಎಂ ಕುರ್ಚಿ ಬಿಟ್ಟುಕೊಡಬೇಕು. ಆದರೆ ಚಮಚಗಳೆಲ್ಲಾ ಸಿದ್ದರಾಮಯ್ಯನ ಪರ ಇದ್ದಾರೆ. ಮಂತ್ರಿಗಿರಿ ಲೈನ್‌ನಲ್ಲಿ ಬಸವರಾಜ ರಾಯರೆಡ್ಡಿ ನಿಂತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಪರ ಮಾತನಾಡುತ್ತಾರೆ. ಸಿದ್ದರಾಮಯ್ಯನಿಂದ ರಾಜ್ಯದ ರಾಜಕೀಯ ವ್ಯವಸ್ಥೆ ಹಾಳಾಗಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಅಕ್ಷರವೂ ಇಲ್ಲ, ಆರೋಗ್ಯವೂ ಇಲ್ಲ. ಸಿದ್ದರಾಮಯ್ಯ ಜೆಡಿಎಸ್‌ನಿಂದ ಬೀದಿಗೆ ಬಿದ್ದದ್ದ. ನಾವೇ ಆತನನ್ನ ಕಾಂಗ್ರೆಸ್‌ಗೆ ಕರೆದುಕೊಂಡು ಬಂದಿದ್ದು ಎಂದು ವಿಶ್ವನಾಥ್‌ ಹೇಳಿದರು.

Leave a Reply

Your email address will not be published. Required fields are marked *