ನಾನು ನಾರಾಯಣಸ್ವಾಮಿ ಮನೆಯಿಂದಲೇ ಕಾರ್ಟಿಯರ್​ ವಾಚ್​ ಕದ್ದಿದ್ದು : ಡಿಕೆಶಿ ಡಿಚ್ಚಿ

ಬೆಂಗಳೂರು : ಬ್ರೇಕ್‌ಫಾಸ್ಟ್‌ ಮೀಟಿಂಗ್‌ ವೇಳೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್‌ ಕಟ್ಟಿದ್ದ ಕಾರ್ಟಿಯರ್​ ವಾಚ್​ ರಾಜ್ಯ ರಾಜಕಾರಣದಲ್ಲಿ ಜೋರಾಗೆ ಸದ್ದು ಮಾಡ್ತಿದೆ. ಡಿಕೆಶಿ ಕಟ್ಟಿದ್ದ ಕಾರ್ಟಿಯರ್​ ವಾಚ್ ಕದ್ದಿದ್ದಾ? ಎಂದು ಪ್ರಶ್ನಿಸಿದ್ದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್‌ ನೀಡಿದ್ದಾರೆ. ನಾರಾಯಣಸ್ವಾಮಿ ಮನೆಯಲ್ಲೇ ಕಾರ್ಟಿಯರ್​ ವಾಚ್​ ಕದ್ದಿದ್ದು ಎಂದು ಛಲವಾದಿ ನಾರಾಯಣಸ್ವಾಮಿಗೆ ಡಿಚ್ಚಿ ಕೊಟ್ಟಿದ್ದಾರೆ.

ಅಫಿಡವಿಟ್​ನಲ್ಲಿ ವಾಚ್ ಇಲ್ಲ ಅಂತ ಹೇಳಿದ್ಯಾರು? ಛಲವಾದಿ ನಾರಾಯಣ ಸ್ವಾಮಿಗೆ ಏನು ಗೊತ್ತು ನನ್ನ ಅಫಿಡವಿಟ್ ಬಗ್ಗೆ ನನಗೆ ಗೊತ್ತು. ನನ್ನ ಕಾಸು ನನಗೆ ಗೊತ್ತು. ಎಂದು ನಾರಾಯಣಸ್ವಾಮಿಗೆ ಡಿಸಿಎಂ ಡಿಕೆಶಿ ಕೌಂಟರ್​ ಕೊಟ್ಟಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ಹೇಳಿದ್ದೇನು?

ಕಾಂಗ್ರೆಸ್​-ಬಿಜೆಪಿ ನಡುವೆ ಕಾರ್ಟಿಯರ್​ ವಾಚ್​ ಸಮರ ತಾರಕಕ್ಕೇರಿದ್ದು, ಡಿಸಿಎಂ ಡಿ.ಕೆ ಶಿವಕುಮಾರ್​ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಅಫಿಡವಿಟ್​ನಲ್ಲಿ ಕಾರ್ಟಿಯರ್​ ವಾಚ್​ ಬಗ್ಗೆ ನಮೂದಿಸಿಲ್ಲ. ರೋಲೆಕ್ಸ್, ಹ್ಯೂಬ್ಲೆಟ್ ವಾಚ್ ಮಾತ್ರ ನಮೂದಿಸಿದ್ದಾರೆ. ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಒಂದು ಕಾರ್ಟಿಯರ್​ ವಾಚ್​ಗೆ ₹26 ರಿಂದ ₹47 ಲಕ್ಷ ಆಗುತ್ತೆ. ಹಾಗಾದ್ರೆ ಈ ಕಾರ್ಟಿಯರ್​ ವಾಚ್​ ಕದ್ದಿದ್ದಾ? ಇಲ್ಲವೇ ದಾಖಲೆ ಬಿಡುಗಡೆ ಮಾಡುವಂತೆ’ ಛಲವಾದಿ ನಾರಾಯಣಸ್ವಾಮಿಗೆ ಆಗ್ರಹಿಸಿದ್ರು.

ನನ್ನ ಕೈಯಲ್ಲಿ ಇದ್ದಿದ್ದು ₹24 ಲಕ್ಷದ ವಾಚ್’ ಎಂದು ಡಿ.ಕೆ ಶಿವಕುಮಾರ್ ಹೇಳಿದ್ರು. ‘ಆಸ್ಟ್ರೇಲಿಯಾದಲ್ಲಿ ಕಾರ್ಟಿಯರ್ ಕಂಪನಿ ವಾಚ್​ನ್ನು ಖರೀದಿ ಮಾಡಿದ್ದೇನೆ. ಕ್ರೆಡಿಟ್ ಕಾರ್ಡ್‌ ಕೊಟ್ಟು ವಾಚ್ ಪರ್ಚೇಸ್ ಮಾಡಿದ್ದೇನೆ’ ಎಂದು ಡಿಸಿಎಂ ಹೇಳಿದ್ದಾರೆ. ಕಾರ್ಟಿಯರ್ ವಾಚ್‌ ನನ್ನ ಸ್ವಂತದ್ದೇ. ನನ್ನ ತಂದೆ ಬಳಿ ಏಳು ವಾಚ್‌ಗಳಿದ್ವು. ಅವುಗಳನ್ನೀಗ ನಾನು ನನ್ನ ತಮ್ಮ ಕಟ್ಟುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

Leave a Reply

Your email address will not be published. Required fields are marked *