ತುಮಕೂರು : ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಬರ್ತಡೇಗೆ ಗುಡ್ ನ್ಯೂಸ್ ಸಿಗುವ ಮುನ್ಸೂಚನೆ ಸಿಕ್ಕಿದೆ ಎಂದು ಡಿ.ಕೆ.ಶಿವಕುಮಾರ್ ಸಂಬಂಧಿ ಮತ್ತು ಕುಣಿಗಲ್ ಶಾಸಕ ಹೆಚ್.ಡಿ.ರಂಗನಾಥ್ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಒಡಂಬಡಿಕೆ ಆಗಿದ್ದು, ಪರಿಪೂರ್ಣವಾಗಲಿ ಎಂಬುದು ಅಭಿಪ್ರಾಯವಾಗಿದೆ. ಒಡಂಬಡಿಕೆಯ ಬಗ್ಗೆ ಇಡೀ ಕರ್ನಾಟಕದ ಜನತೆ ಮಾತನಾಡುತ್ತಿದ್ದಾರೆ. ಒಡಂಬಡಿಕೆ ಪೂರ್ಣವಾಗುವ ಕಡೆ ಜನ ಮುಖ ಮಾಡಿ ನೋಡುತ್ತಿದ್ದಾರೆ. ಸಿಎಂ ವಿಚಾರವಾಗಿ ನಾನು ಮಾತನಾಡಬಾರದು, ನೋಟಿಸ್ ಕೊಟ್ಟಿದ್ದಾರೆ. ಎಲ್ಲದಕ್ಕೂ ನಾವು ಹೈಕಮಾಂಡ್ ಕಡೆ ಮುಖ ಮಾಡಿ ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಮೇ 15ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹುಟ್ಟುಹಬ್ಬ ಇದೆ. ಡಿ.ಕೆ.ಶಿವಕುಮಾರ್ ಅವರಿಗೆ ಒಳ್ಳೆಯದಾಗುತ್ತದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಒಟ್ಟಾರೆ ಕಳೆದ ಮೂರ್ನಾಲ್ಕು ದಿನದಿಂದ ಡಿಕೆ ಬ್ರದರ್ಸ್ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಮೇಲಿಂದ ಮೇಲೆ ಹೈಕಮಾಂಡ್ ಭೇಟಿ ನಡೆಯುತ್ತಲೇ ಇದೆ.