ಡಿಜಿಟಲ್‌ ಬಳಿಕ ಇದೀಗ ಮುದ್ರಣ ಲೋಕಕ್ಕೆ ಪೊಲಿಟಿಕಲ್‌ 360 ಎಂಟ್ರಿ..!

ಬೆಂಗಳೂರು : ರಾಜಕೀಯ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಸುದ್ದಿ ಸಂಸ್ಥೆ ಪೊಲಿಟಿಕಲ್ 360. ಈಗ ತನ್ನ ಸೇವೆಯನ್ನು ಇನ್ನಷ್ಟು ವಿಸ್ತರಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಡಿಜಿಟಲ್ ವೇದಿಕೆಯಲ್ಲಿನ ಯಶಸ್ಸಿನ ಬಳಿಕ, ಅಧಿಕೃತವಾಗಿ ಮಂತ್ಲಿ ಮಾಗಜಿನ್‌ ಲಾಂಚ್ ಮಾಡಿ ರಾಜ್ಯ ರಾಜಕಾರಣದ ಇಂಚಿಂಚೂ ಸುದ್ದಿಯನ್ನು ಓದುಗರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ಕೆ ಕೈ ಹಾಕಿದೆ.

ಈ ಹೊಸ ಮಾಸಪತ್ರಿಕೆಯ ಮೂಲಕ, ರಾಜ್ಯ ಮತ್ತು ದೇಶದ ರಾಜಕೀಯ ಬೆಳವಣಿಗೆಗಳು, ವಿಶ್ಲೇಷಣೆಗಳು, ವಿಶೇಷ ವರದಿಗಳು ಹಾಗೂ ಪ್ರಮುಖ ನಾಯಕರ ಸಂದರ್ಶನಗಳು ಒಂದೇ ವೇದಿಕೆಯಲ್ಲಿ ಓದುಗರಿಗೆ ತಲುಪಿಸುವ ಪ್ರಯತ್ನ ಇದಾಗಿದೆ.

ಈ ನಿಟ್ಟಿನಲ್ಲಿ ದಿ ಲಲಿತ್‌ ಅಶೋಕ ಹೊಟೆಲ್‌ನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ.ವಿ.ಪ್ರಭಾಕರ್, ಮಾನ್ಯ ಹಿರಿಯ ಶಾಸಕರಾದ ಶ್ರೀ ಜಿ.ಟಿ.ದೇವೇಗೌಡ. ಮಾನ್ಯ ವಿಧಾನಪರಿಷತ್ ಸದಸ್ಯರಾದ ಶ್ರೀ ಕೆ.ಶಿವಕುಮಾರ್, ಮಾನ್ಯ ವಿಧಾಪರಿಷತ್ ಮಾಜಿ ಸಭಾಪತಿಗಳಾದ ವಿ.ಎಸ್.ಸುದರ್ಶನ್, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ಶಿವಾನಂದ ತಡಗೂರು ಹಾಗೂ ನಟರಾದ ದುನಿಯಾ ವಿಜಯ್, ಡಾಲಿ ಧನಂಜಯ್ ಅವರು ಮೊದಲ ಸಂಚಿಕೆಯನ್ನ ಲೋಕಾರ್ಪಣೆ ಮಾಡಿ. ವಿಶೇಷ ಸಂಚಿಕೆಗಳ ಕವರ್ ಪೇಜ್‌ಗಳಿಗೆ ಹಸ್ತಾಕ್ಷರ ನೀಡಿದ್ರು. ಇನ್ನು ಅನಿವಾರ್ಯ ಕಾರಣಗಳಿಂದ ನಿನ್ನೆ ಸಂಜೆಯ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ಮಾನ್ಯ ಮುಖ್ಯ ಮಂತ್ರಿಗಳು ಇಂದು ಅಧಿಕೃತ ನಿವಾಸ ಕಾವೇರಿಗೆ ಕರೆಸಿ ತುಂಬು ಹೃದಯದಿಂದ ಶುಭಕೋರಿದರು. ತಮ್ಮ ಹಸ್ತಾಕ್ಷರದ ಮೂಲಕ ನಮ್ಮ ಮ್ಯಾಗಜಿನ್ ಕವರ್ ಪೇಜ್ ಅನಾವರಣಗೊಳಿಸಿದರು.

ಒಟ್ಟಾರೆ ಇಂದಿನ ವೇಗದ ಡಿಜಿಟಲ್ ಯುಗದಲ್ಲಿಯೂ, ಓದುಗರಿಗೆ ಆಳವಾದ ಮತ್ತು ವಿಶ್ವಾಸಾರ್ಹ ರಾಜಕೀಯ ಮಾಹಿತಿ ನೀಡಲು ಮಾಸಪತ್ರಿಕೆ ಉತ್ತಮ ಮಾರ್ಗ ಎಂದು ಉಪಸ್ಥಿತರಿದ್ದ ಗಣ್ಯರು ಮುಖ್ಯ ಸಂಪಾದಕ ಪುಟ್ಟಪ್ಪ ಅವರನ್ನ ಶ್ಲಾಗಿಸಿದರು.

Leave a Reply

Your email address will not be published. Required fields are marked *