ತಮಿಳುನಾಡಿನಲ್ಲಿ ಕುತೂಹಲ ಮೂಡಿಸಿದ ಆರಂಭಿಕ ಟ್ರೆಂಡ್​, ಡಿಎಂಕೆ ನಾಗಾಲೋಟ: ಟಿವಿಕೆ ಎಲ್ಲೆಲ್ಲಿ ಮುನ್ನಡೆ?

ತಮಿಳುನಾಡು : ನೆರೆಯ ರಾಜ್ಯ ತಮಿಳುನಾಡು ವಿಧಾನಸಭೆ ಚುನಾವಣೆಯ ಆರಂಭಿಕ ಎಣಿಕೆಯಲ್ಲಿ ರಾಜಕೀಯವಾಗಿ ಕುತೂಹಲಕಾರ ಚಿತ್ರಣ ಕಾಣಿಸುತ್ತಿದೆ. ಪ್ರಾರಂಭಿಕ ಟ್ರೆಂಡ್‌ಗಳ ಪ್ರಕಾರ, ಡಿಎಂಕೆ-ಕಾಂಗ್ರೆಸ್ ನೇತೃತ್ವದ ಜಾತ್ಯತೀತ ಪ್ರಗತಿಶೀಲ ಮೈತ್ರಿಕೂಟ 53 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

ಮತ್ತೊಂದೆಡೆ, ಎಐಎಡಿಎಂಕೆ-ಬಿಜೆಪಿ ನೇತೃತ್ವದ ಮೈತ್ರಿಕೂಟ 21 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ಟಿವಿಕೆ ಕೂಡ 15 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.

ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಬೇಕಾಗಿರುವ ಮ್ಯಾಜಿಕ್ ಸಂಖ್ಯೆ ಅಂದರೆ, ಯಾರ ಮೈತ್ರಿಕೂಟ ಅಥವಾ ಪಕ್ಷ 118 ಸ್ಥಾನಗಳನ್ನು ತಲುಪುತ್ತದೋ, ಅವರಿಗೆ ಬಹುಮತ ಸಿಗುತ್ತದೆ. ಹೀಗಿರುವಾಗ ಡಿಎಂಕೆ ಸರ್ಕಾರ ಈಗಾಗಲೇ ಆರಂಭಿಕ ಟ್ರೆಂಡ್​ ನಲ್ಲಿ ಮುನ್ನಡೆ ಸಾಧಿಸುತ್ತಿದ್ದು, ರಾಜಕೀಯ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ : ಸಿಎಂ ಬದಲಾವಣೆ ಇಲ್ಲ, ಸಿದ್ದರಾಮಯ್ಯನವರೇ 5 ವರ್ಷವೂ ಸಿಎಂ : ಖರ್ಗೆ ಸ್ಪಷ್ಟನೆ

ರಾಜ್ಯದ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಿಗೆ 2026ರ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ. ಈ ಬಾರಿ ಚುನಾವಣೆಗೆ ವಿಶೇಷ ಮಹತ್ವ ಇದೆ. ಕಾರಣ, ತಮಿಳು ಸೂಪರ್‌ಸ್ಟಾರ್ ವಿಜಯ್ ತಮ್ಮ ಪಕ್ಷ ಟಿವಿಕೆ (ತಮಿಳಗ ವೆಟ್ಟೈ ಕಳಗಂ) ಮೂಲಕ ರಾಜಕೀಯಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಇದರಿಂದ ಇತಿಹಾಸದಿಂದಲೂ ಇದ್ದ ಡಿಎಂಕೆ vs ಎಐಎಡಿಎಂಕೆ ಎಂಬ ದ್ವಿಪಕ್ಷದ ರಾಜಕೀಯಕ್ಕೆ ಮೂರನೇ ಕೋನ ಸೇರಿದೆ.

ಈ ಚುನಾವಣೆಯಲ್ಲಿ ಮೂರು ಪ್ರಮುಖ ಬಣಗಳ ನಡುವೆ ಕಾದಾಟ ನಡೆಯುತ್ತಿದೆ. ಮೊದಲದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟ (ಎಸ್‌ಪಿಎ). ಡಿಎಂಕೆ ಸ್ವತಃ 164 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಅದರ ಮಿತ್ರಪಕ್ಷಗಳಾದ ಕಾಂಗ್ರೆಸ್ ಸೇರಿದಂತೆ ಇತರರು ಒಟ್ಟು 70 ಸ್ಥಾನಗಳಲ್ಲಿ ಕಣಕ್ಕಿಳಿದಿದ್ದಾರೆ. ಎಐಎಡಿಎಂಕೆ 167 ರಿಂದ 169 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇದರ ಪ್ರಮುಖ ಮಿತ್ರ ಪಕ್ಷ ಬಿಜೆಪಿ 27 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಜೊತೆಗೆ ಪಿಎಂಕೆ 18 ಸ್ಥಾನಗಳು, ಎಎಂಎಂಕೆ 11 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಮೂರನೇ ಬಣವಾದ ಟಿವಿಕೆ ಪಕ್ಷವು, ವಿಜಯ್ ನೇತೃತ್ವದಲ್ಲಿ, ಎಲ್ಲ 234 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸಿದೆ.

Leave a Reply

Your email address will not be published. Required fields are marked *