ಬಂಗಾಳದಲ್ಲಿ ದೀದಿಗೆ ಶಾಕ್, ತಮಿಳುನಾಡಿನಲ್ಲಿ ವಿಜಯ್ ಸುನಾಮಿ, ಕೇರಳದಲ್ಲಿ ಕಾಂಗ್ರೆಸ್ ಕಂಬ್ಯಾಕ್, ರಾಷ್ಟ್ರ ರಾಜಕೀಯ ರೀಸೆಟ್!

ನವದೆಹಲಿ : ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಪಂಚರಾಜ್ಯ ಚುನಾವಣಾ ಫಲಿತಾಂಶ ಸ್ಪಷ್ಟವಾಗಿ ಹೊರಬಿದ್ದಿದೆ. ಆ ಮೂಲಕ ರಾಷ್ಟ್ರ ರಾಜಕಾರಣದ ಸಂಪೂರ್ಣ ಗೇಮ್ ಚೇಂಜ್‌ ಆಗಿದೆ. ಕೆಲ ರಾಜ್ಯಗಳಲ್ಲಿ ಆಡಳಿತ ಪಕ್ಷ ಡಾಮಿನೇಟ್ ಮಾಡಿದ್ರೆ, ಇನ್ನೂ ಕೆಲವು ಕಡೆ ವಿರೋಧ ಪಕ್ಷಗಳು ಶಾಕ್ ಕೊಟ್ಟಿವೆ.

ದೇಶದ ಗಮನ ಸೆಳೆದ 2026ರ ಪಂಚರಾಜ್ಯ ಚುನಾವಣಾ ಫಲಿತಾಂಶಗಳು ಇದೀಗ ಹೊರಬಿದ್ದಿದ್ದು, ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯ ಗಾಳಿ ಬೀಸಿದೆ. ಕೇರಳ, ತಮಿಳುನಾಡಿನಲ್ಲಿ ಆಡಳಿತ ಪಕ್ಷ ಬಿಜೆಪಿ ಖಾತೆ ತೆರೆಯಲು ವಿಫವಾಗಿದ್ರೆ ಪಶ್ಚಿಮ ಬಂಗಾಳ ಅಸ್ಸಾಂ ಪುದುಚೆರಿಯಲ್ಲಿ ಪ್ರಚಂಡ ಗೆಲುವು ಸಾಧಿಸಿದೆ. ಇನ್ನು ಕೇರಳದಲ್ಲಿ ಕಾಂಗ್ರೆಸ್‌ ಕಂಬ್ಯಾಕ್‌ ಮಾಡಿದ್ರೆ ತಮಿಳುನಾಡಿನಲ್ಲಿ ಔಟ್‌ ಆಫ್‌ ದಿ ಸಿಲಬಸ್‌ ಎಂಬಂತೆ ನಟ ವಿಜಯ್‌ ನೇತೃತ್ವದ ಟಿವಿಕೆ ಗೆದ್ದು ಬೀಗಿದೆ.

ಇದನ್ನೂ ಓದಿ : ದೀದಿಗೆ ಡಬಲ್ ಶಾಕ್!! ಬಿಜೆಪಿ ಅಭ್ಯರ್ಥಿ ವಿರುದ್ಧ 15 ಸಾವಿರ ಮತಗಳ ಅಂತರದಿಂದ ಮಮತಾ ಬ್ಯಾನರ್ಜಿ ಸೋಲು

ಪಂಚ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದಲ್ಲಿ ಭಾರೀ ರಾಜಕೀಯ ಟ್ವಿಸ್ಟ್ ಸಿಕ್ಕಿದ್ದು, ಬಿಜೆಪಿ ದೊಡ್ಡ ಮಟ್ಟದಲ್ಲಿ ಮುನ್ನಡೆ ಪಡೆದು, ಮೊದಲ ಬಾರಿಗೆ ಅಧಿಕಾರ ಹಿಡಿಯಲು ಸಜ್ಜಾಗಿದೆ. ಇನ್ನು ಅಸ್ಸಾಂನಲ್ಲಿ ತನ್ನ ಪ್ರಾಬಲ್ಯ ತೋರಿಸಿ ಸತತ ಮೂರನೇ ಬಾರಿ ಚುಕ್ಕಾಣಿ ಹಿಡಿಯುತ್ತಿದೆ. ಪುದುಚೆರಿಯಲ್ಲಿ ಕೂಡ NDA ಮೈತ್ರಿ ಮತ್ತೆ ಅಧಿಕಾರಕ್ಕೆ ಬರುತ್ತಿದ್ದು, ರಂಗಸಾಮಿ ನೇತೃತ್ವದಲ್ಲಿ ಸರ್ಕಾರ ರಚನೆ ಖಚಿತವಾಗಿದೆ.

ವಿಶೇಷ ಅಂದ್ರೆ ತೀವ್ರಕುತೂಹಲ ಮೂಡಿಸಿದ್ದ ತಮಿಳುನಾಡು ಅಖಾಡಲ್ಲಿ DMK, AIADMK ಶಾಕ್ ಕೊಟ್ಟ ನಟ ವಿಜಯ್ ನೇತೃತ್ವದ TVK ಪಕ್ಷ ಬಹುಮತದತ್ತ ಸಾಗಿದೆ. ಕೇರಳಲ್ಲಿ ಆಡಳಿತ ಬದಲಾವಣೆಯ ಟ್ರೆಂಡ್ ಚೇಂಜ್‌ ಆಗಿದ್ದು, ಕಾಂಗ್ರೆಸ್ ನೇತೃತ್ವದ UDF ಮುನ್ನಡೆ ಸಾಧಿಸಿ ಅಧಿಕಾರ ಹಿಡಿಯಲು ಸಿದ್ಧವಾಗಿದೆ.

ಇನ್ನು ಕರ್ನಾಟಕದ ಉಪ ಚುನಾವಣೆ ನೋಡೋದಾದ್ರೆ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ಗೆ ಮತದಾರ ಪ್ರಭು ಮಣೆ ಹಾಕಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಯಾಗಿದೆ.

ಒಟ್ಟಿನಲ್ಲಿ ಆಡಳಿತ ಪಕ್ಷ ಬಿಜೆಪಿ ಅಸ್ಸಾಂ ಪುದುಚೆರಿ ಮತ್ತು ಬಂಗಾಳದಲ್ಲಿ ಬಲ ಹೆಚ್ಚಿಸಿಕೊಂಡ್ರೆ, ಕಾಂಗ್ರೆಸ್ ಕೇರಳದಲ್ಲಿ ಕಂಬ್ಯಾಕ್ ಮಾಡಿದೆ. ಇನ್ನು ತಮಿಳುನಾಡಿನಲ್ಲಿ ಹೊಸ ರಾಜಕೀಯ ಶಕ್ತಿ ಉದಯವಾಗಿದ್ದು, ಈ ಪಂಚರಾಜ್ಯ ಫಲಿತಾಂಶಗಳು ದೇಶದ ರಾಜಕೀಯ ದಿಕ್ಕನ್ನೇ ಬದಲಾಯಿಸುವ ಸೂಚನೆ ನೀಡುತ್ತಿದೆ. ಮುಂದಿನ ಲೋಕಸಭೆ ಚುನಾವಣೆಗೆ ಇದನ್ನ ಒಂದು ಸೆಮಿಫೈನಲ್ ಅಂದ್ರೂ ತಪ್ಪಾಗಲ್ಲ.

Leave a Reply

Your email address will not be published. Required fields are marked *