ಬೆಂಗಳೂರು : ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಇವೆಲ್ಲವನ್ನೂ ಬಿಟ್ಟು ಈ ಸರ್ಕಾರ ಕಳೆದ ಕೆಲ ತಿಂಗಳಿಂದ ಆರ್‌ಎಸ್ಎಸ್ ಬ್ಯಾನ್ ಅಂತಾ ಮ್ಯಾಟರ್ ಡೈವರ್ಟ್ ಮಾಡಿಕೊಂಡು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಮದು ರಾಜ್ಯದಲ್ಲಿ ಮಳೆಯಿಂದ ಅನೇಕ ಅನಾಹುತಗಳಾಗಿವೆ. ರೈತರು ಬೆಳೆದ ಬೆಳೆ ನಾಶವಾಗಿದೆ, ಅದರ ಬಗ್ಗೆ ಗಮನಹರಿಸಬೇಕು ರಾಜ್ಯ ಸರ್ಕಾರ ಕಳೆದ ಕೆಲ ತಿಂಗಳಿಂದ ಆರ್‌ಎಸ್ ಎಸ್ ಸಂಬಂಧ ಡೈವರ್ಟ್ ಮಾಡಿಕೊಂಡು ಹೊರಟಿದೆ. ಬೆಂಗಳೂರಿನಲ್ಲಿ ಗುಂಡಿಗಳನ್ನ ಮುಚ್ಚಬೇಕಿತ್ತು. ಈಗ ಅದಕ್ಕೆ ಮತ್ತೆ ಒಂದು ವಾರ ಗಡುವು ಕೊಟ್ಟಿದಾರೆ. ಇನ್ನೊಂದೆಡೆ ಜನ ಗುಡಿಗಳಲ್ಲಿ ಬಿದ್ದು ಸಾಯ್ತಿದಾರೆ. ಅದನ್ನು ಮೊದಲು ತಪ್ಪಿಸಿ. ಆರ್‌ಎಸ್ಎಸ್ ಬಗ್ಗೆ ಏನ್ ಚರ್ಚೆ ಮಾಡ್ತೀರಿ. ಅದರಿಂದ ಏನ್ ಉಪಯೋಗ? ಇದೆಲ್ಲ ಇಂದೇ ಬಿಡಿ ಎಂದು ಗುಡುಗಿದರು.
ಕಳೆದ ಎರಡು ವರ್ಷಗಳಿಂದ ಅಧಿಕಾರ ಹಸ್ತಾಂತರ ವಿಚಾರದಲ್ಲೇ ಕಾಲ ಕಳೆದಿದ್ದೀರಿ. ಇದರ ಜೊತೆಗೆ ಬುರುಡೆ ಕತೆ ಅಂಥಾ ಹೇಳಿ, ಅದ್ಯಾರೋ ಕಂಪ್ಲೆಂಟ್ ಕೊಟ್ರು ಅಂತಾ ಮೂರು ತಿಂಗಳು ರಾಜ್ಯದಲ್ಲಿ ಬುರುಡೆ ಕತೆ ಆಯ್ತು. ಇದರಿಂದ ಆಗಿದ್ದೇನು? ಸೊನ್ನೆ. ತಿಮರೋಡಿ ಬಳಿ ಅದೆಂತದ್ದೋ ವೆಪನ್ ಇತ್ತು ಅಂಥಾ ಹೇಳಿದರು. ಈಗ ಆತನ ಅರೆಸ್ಟ್ ಗೂ ಸ್ಟೇ ಕೊಡಲಾಗಿದೆ, ಈ ಆರ್‌ಎಸ್ಎಸ್ ವಿಚಾರದಲ್ಲಿ ಪ್ರತಿನಿತ್ಯ ಟೀಕೆ ಮಾಡೋದನ್ನ ಬಿಟ್ಟು ಸರ್ಕಾರ ನಡೆಸೋ ಕಡೆ ಗಮನ ಕೊಡಿ ಎಂದು ಕುಮಾರಸ್ವಾಮಿ ಎಚ್ಚರಿಸಿದರು.
ಇನ್ನು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತಾಡಿದ ಹೆಚ್ ಡಿಕೆ, ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಲ್ಲಿ ಈ ದೇಶದಲ್ಲಿ ಯಾರು ಏನ್ ಬೇಕಾದರೂ ಆಗಬಹುದು. ಒಂದು ಹೆಸರನ್ನು ಹೇಳಿಕೊಂಡು ನಾನು ಮಾತಾಡೋ ಅವಶ್ಯಕತೆ ಇಲ್ಲ ಎಂದರು. ಯಾರು ಬೇಕಾದರೂ ಈ ಸಂವಿಧಾನಲ್ಲಿ ಮುಖ್ಯಮಂತ್ರಿ ಆಗೋಕೆ ಅವಶ್ಯಕತೆ ಇದೆ. ಅದೆಲ್ಲ ಅವರ ಪಕ್ಷಕ್ಕೆ ಸೇರಿದ್ದು. ಯಾರನ್ನ ಮಾಡಬೇಕು. ಯಾರನ್ನ ಬಿಡಬೇಕು ಅನ್ನೋದು ಅವರ ಪಕ್ಷಕ್ಕೆ ಬಿಟ್ಡಿದ್ದು. ನಾನ್ಯಾಕೆ ಅದರ ಬಗ್ಗೆ ಮಾತಾಡಲಿ ಎಂದರು.