ಮಗನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ RSS ಅನ್ನೇ ಬ್ಯಾನ್ ಮಾಡ್ಬೇಕು ಎಂದ ಖರ್ಗೆ

ನವದೆಹಲಿ : ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್ಎಸ್ ಚಟುವಟಿಕೆ ನಿಷೇಧಿಸಬೇಕೆಂದು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಕೋಲಾಹಲವೇ ಸೃಷ್ಟಿಸಿದ್ದರು. ಈ ವಿವಾದಗಳ ನಡುವೆಯೇ ಇದೀಗ ಅವರ ತಂದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರ್‌ಎಸ್ಎಸ್ ದೇಶದಿಂದ ನಿಷೇಧಿಸಬೇಕು ಸ್ಪೋಟಕ‌ ಹೇಳಿಕೆ ನೀಡಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್ಎಸ್‌ನಿಂದ ದೇಶದ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುತ್ತಿದೆ. ಸದ್ಯ ದೇಶದಲ್ಲಿ ವಿಫಲಗೊಂಡಿರುವ ಕಾನೂನು ಸುವ್ಯವಸ್ಥೆಗೆ ಆರ್‌ಎಸ್ಎಸ್ ಹಾಗೂ ಬಿಜೆಪಿ ಕಾರಣವಾಗಿದೆ. ಇದು ನನ್ನ ವೈಯುಕ್ತಿಕ ಅಭಿಪ್ರಾಯ. ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ, ಆರ್‌ಎಸ್ಎಸ್ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದರು. ಇನ್ನೊಂದು ಕಡೆ ಸರ್ದಾರ್ ವಲ್ಲಭಾಯಿ ಪಟೇಲ್ 150ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಲ್ಲಿಕಾರ್ಜುನ ಖರ್ಗೆ ಭಾರಿ ಸಂಚಲನ ಸೃಷ್ಟಿಸಿದ್ದಾರೆ.

ಬಳಿಕ ಮಾತನಾಡಿ, ಪ್ರಧಾನಿ ಮೋದಿ ಸರ್ದಾರ್ ಪಟೇಲ್ ಅವರನ್ನು ನಿಜಕ್ಕೂ ಗೌರವಿಸುತ್ತಿದ್ದರೆ ಆರ್‌ಎಸ್ಎಸ್‌ ಬ್ಯಾನ್ ಮಾಡಲಿ. ದೇಶದಲ್ಲಿ ನಡೆಯತ್ತಿರುವ ಎಲ್ಲಾ ಕಾನೂನು ಸುವ್ಯವಸ್ಥೆ ವಿಚಾರ, ಅದರ ವಿಫಲತೆಗೆ ಆರ್‌ಎಸ್ಎಸ್‌ ಹಾಗೂ ಬಿಜೆಪಿ ಕಾರಣ ಎಂದರು.

ಇನ್ನು ಭಾರತದಲ್ಲಿ ಒಗ್ಗಟ್ಟು ಮೂಡಿಸಲು, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಇಂದಿರಾ ಗಾಂಧಿ ಎಲ್ಲಾ ಪ್ರಯತ್ನ ಮಾಡಿದ್ದಾರೆ. ಮಹಾತ್ಮಾ ಗಾಂಧಿ ಹತ್ಯೆಯನ್ನು ಆರ್‌ಎಸ್ಎಸ್‌ ಸಂಭ್ರಮಿಸಿದೆ. ಆರ್‌ಎಸ್ಎಸ್‌ ಬ್ಯಾನ್ ಮಾಡಲು ಯಾವುದೇ ಮಾರ್ಗವಿಲ್ಲ, ಆದರೆ ಬ್ಯಾನ್ ಮಾಡದೇ ಇರಲು ಸಾಧ್ಯವಿಲ್ಲ ಎಂದು ಪತ್ರ ಬರೆದಿದ್ದರು ಎಂದಿದ್ದಾರೆ. ಸಂಘದ ಸದಸ್ಯರಲ್ಲಿ ಸಂಪೂರ್ಣ ವಿಷವಿದೆ. ಅವರು ಮಹಾತ್ಮಾ ಗಾಂಧಿ ಹತ್ಯೆಯನ್ನು ಸ್ವೀಟ್ ಹಂಚಿ ಸಂಭ್ರಮಿಸಿದ್ದರು ಎಂದರು.

Leave a Reply

Your email address will not be published. Required fields are marked *