ನನ್ನ ಹಾಗೂ ಜಮೀರ್ ಮಧ್ಯೆ ಯಾವ ಗಲಾಟೆಯೂ ನಡೆದಿಲ್ಲ ; ಡಿಕೆಶಿ ಸ್ಪಷ್ಟನೆ

ನವದೆಹಲಿ : ದಾವಣಗೆರೆ ಉಪಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಠಿಯಾಗಿದೆ. ಸಚಿವ ಜಮೀರ್‌ ಅಹ್ಮದ್‌ ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಹಬ್ಬಿದೆ. ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಜಮೀರ್ ನಡುವೆ ಗಲಾಟೆ ನಡೆದಿದೆ ಎನ್ನಲಾಗ್ತಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಡಿ.ಕೆ.ಶಿವಕುಮಾರ್ ಅದು ಸುಳ್ಳು ಸುದ್ದಿ. ಪಾಪ, ಜಮೀರ್ ನನ್ನ ಜೊತೆ ಮಾತನಾಡಿಲ್ಲ, ಈ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯೂ ಆಗಿಲ್ಲ. ನನ್ನ ಕುಟುಂಬದ ಕೆಲಸದ ಹಿನ್ನೆಲೆಯಲ್ಲಿ ಸಂಪುಟ ಸಭೆ ಮುಗಿಸಿಕೊಂಡು ನಾನು ಹೋದೆ. ಅದರ ಹೊರತಾಗಿ ಬೇರೆ ಯಾವ ವಿಚಾರವೂ ಇಲ್ಲ. ಹೈಕಮಾಂಡ್ ಯಾವ ತೀರ್ಮಾನ ನೀಡಿರುತ್ತದೋ ಅದರಂತೆ ಸಿಎಂ ಹಾಗೂ ಪಕ್ಷ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಟಗರು ಯಾರಿಗೂ ಸುಮ್ ಸುಮ್ಮನೆ ಗುದ್ದಲ್ಲ ಈಗ ಗುರಾಯಿಸ್ತಾ ಇದೆ, ಸಮಯ ಬಂದಾಗ ಗುದ್ದುತ್ತೆ

ಅಲ್ಪಸಂಖ್ಯಾತ ನಾಯಕರನ್ನು ಕಾಂಗ್ರೆಸ್‌ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕೇಳಿದಾಗ, ಪ್ರತಿ ಸಂದರ್ಭದಲ್ಲಿ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಪಕ್ಷದಷ್ಟು ಬೇರೆ ಯಾರೂ ರಕ್ಷಣೆ ಮಾಡಿಲ್ಲ. ಹಿಂದೆಯೂ ಬೇರೆಯವರು ಮಾಡಿಲ್ಲ. ಮುಂದೆಯೂ ಮಾಡಲು ಆಗುವುದಿಲ್ಲ. ಆ ಕ್ಷೇತ್ರದಲ್ಲಿ ಅವರ ಜನಸಂಖ್ಯೆ ಹೆಚ್ಚಾಗಿದೆ ನಿಜ.

ಆದ್ರೆ ಕಳೆದ 30-40 ವರ್ಷಗಳಿಂದ ಶಾಮನೂರು ಶಿವಶಂಕರಪ್ಪನವರು ಆ ಕ್ಷೇತ್ರವನ್ನು ಕಾಪಾಡಿಕೊಂಡು ಬಂದಿದ್ದಾರೆ. ಜಮೀರ್, ನಸೀರ್ ಹಾಗೂ ಜಬ್ಬಾರ್ ಅವರ ಒಪ್ಪಿದ ನಂತರವೇ ನಾವು ಟಿಕೆಟ್ ನೀಡಿದ್ದೇವೆ” ಎಂದು ತಿಳಿಸಿದರು. ಫಲಿತಾಂಶ ಬರುವ ಮುಂಚೆಯೇ ಯಾಕೆ ಆತುರದ ಕ್ರಮ ಎಂದು ಕೇಳಿದಾಗ, “ಕೆಲವು ವರದಿಗಳ ಆಧಾರದ ಮೇಲೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡಿದ್ದಾರೆ” ಎಂದು ತಿಳಿಸಿದರು.

Leave a Reply

Your email address will not be published. Required fields are marked *