ಬೆಂಗಳೂರು: ಟಗರು ಯಾರಿಗೂ ಸುಮ್ ಸುಮ್ಮನೆ ಗುದ್ದಲ್ಲ. ಈಗ ಗುರಾಯಿಸ್ತಾ ಇದೆ. ಯಾವ ಕಾಲಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪರ ಸಚಿವ ಹೆಚ್.ಸಿ.ಮಹದೇವಪ್ಪ ಬ್ಯಾಟ್ ಬೀಸಿದ್ದಾರೆ.
ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ನಗರದಲ್ಲಿ ಮಾತನಾಡಿದ ಅವರು, ಟಗರಿ ಅಂದ್ರೆ ಟಗರೇ ಅಲ್ವಾ? ಬಂದ್ರೆ ಗುದ್ದುಬಿಡುತ್ತೆ. ರಾಜಣ್ಣ ಅವರಿಗೆ ಸಿಎಂ ಮೇಲೆ ಪ್ರೀತಿ ಇದೆಯಲ್ಲಾ, ಹಾಗಾಗಿ ಅವರು ಸಿಎಂ ಜೋರಾಗಿ ಮಾತಾಡಬೇಕು ಅಂತಾರೆ. ಜೋರಾಗಿ ಮಾತಾಡಿದ್ರು ಇಲ್ಲದಿದ್ದರರೂ ಯಾವ ಯಾವ ಕಾಲದಲ್ಲಿ ಏನು ಮಾಡಬೇಕು ಅಂತ ಮುಖ್ಯಮಂತ್ರಿಗಳಿಗೆ ಗೊತ್ತಿದೆ ಎಂದರು.
ಇದನ್ನೂ ಓದಿ : ಸಿಎಂ ಕುರ್ಚಿಗೆ ಅರ್ಜಿ ಕರೆದರೆ ಹಾಕಬಹುದು, ಅದ್ರೆ ಕರೆಯಲ್ವಲ್ಲ : ಪರಮೇಶ್ವರ್
ಇನ್ನು ಮುಸ್ಲಿಂ ನಾಯಕರೊಂದಿಗಿನ ಮೀಟಿಂಗ್ ವಿಚಾರವಾಗಿ ಮಾತನಾಡಿ, ಮುಸ್ಲಿಮರು ದಲಿತರು ಹಿಂದುಳಿದ ವರ್ಗದವರು ಕಾಂಗ್ರೆಸ್ ಪಕ್ಷದ ಬೆನ್ನೆಲುಬು. ಅವರು ಸಮಾಧಾನ ಆಗಿದ್ದಾರೋ, ಅಸಮಾಧಾನ ಆಗಿದ್ದಾರೋ ನನಗೆ ಗೊತ್ತಿಲ್ಲ. ನೀವು ಹೇಳಿದ್ದೀರಿ, ಯಾರ್ಯಾರು ಅಸಮಾಧಾನ ಆಗಿದ್ದಾರೆ ಗೊತ್ತಿಲ್ಲ. ನನಗೆ ಗೊತ್ತಾದ್ರೆ ನನ್ನ ಕೈಯಲ್ಲಿ ಏನು ಮಾಡಬೇಕು ಅದು ಮಾಡ್ತೀನಿ ಎಂದು ಹೇಳಿದರು.
ಸಿಎಂ ಏನು ಮಾಡ್ತಾ ಇಲ್ಲ? ಅಸಹಾಯಕರು ಎಂಬ ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, “ಸಿಎಂ ಯಾವಾಗ ದುರ್ಬಲ ಆಗಿದ್ದಾರೆ, ಯಾವಾಗಲೂ ಗಟ್ಟಿನೇ ಅವರು. ಸಮನ್ವಯತೆ ಕಾಪಾಡೋಕೆ ಏನು ಬೇಕೋ ಅದು ಮಾಡ್ತಾರೆ ಎಂದು ಸಮರ್ಥಿಸಿಕೊಂಡರು.
ಸಚಿವ ಜಮೀರ್ ಅಹ್ಮದ್ ಖಾನ್ ಜೊತೆಗಿನ ಭೇಟಿ ವಿಚಾರವಾಗಿ ಮಾತನಾಡಿ, ಜಮೀರ್ ನಾನು ಉಪ್ಪಿಟ್ಟು ತಿಂದ್ವಿ, ವಡೆ ತಿಂದ್ವಿ, ಅದು ಬಿಟ್ಟು ಬೇರೇನೂ ಚರ್ಚೆ ಆಗಿಲ್ಲ. ನಿನ್ನೆ ಸಂಜೆ 6:30 ಆಗಿತ್ತು, ನಾನು ಇಲ್ಲಿ ತುಂಬಾ ಜನ ಇದ್ರು. ಇಲ್ಲಿ ಉಪ್ಪಿಟ್ಟಿದೆ ಬನ್ನಿ ಅಂದ್ರು, ಒಪ್ಪಿಟ್ಟು ಅಂದ್ರೆ ನನಗೂ ಇಷ್ಟ ಹಾಗಿ ಹೋಗಿದ್ದೆ ಎಂದರು.