ಬೆಂಗಳೂರು : ನವೆಂಬರ್ ಕ್ರಾಂತಿ, ಸಚಿವ ಸಂಪುಟ ಪುನರ್ ರಚನೆ ಗೊಂದಲಗಳ ನಡುವೆಯೇ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಈ ಡಿನ್ನರ್ ಮೀಟಿಂಗ್ ಕಾಂಗ್ರೆಸ್ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದ್ರೆ, ವಿಪಕ್ಷಗಳಿಗೆ ಟೀಕಾಸ್ತ್ರವಾಗಿದೆ. ಇಂದು ನಡೆಯಲಿರುವ ಔತಣಕೂಟ ಸಭೆಯ ನಂತರ ಕಾಂಗ್ರೆಸ್ ಬೆಳವಣಿಗೆಗಳು ಏನಿರಲಿವೆ ಎಂಬ ಕುತೂಹಲ ರಾಜ್ಯ ರಾಜಕಾರಣದಲ್ಲಿ ಉದ್ಭವಿಸಿದೆ.
ಇನ್ನು ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕಲಹ ಜೋರಾಗಿಯೇ ನಡೆಯುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಇಂದು ಸಚಿವರಿಗೆ ಔತಣಕೂಟ ಏರ್ಪಡಿಸಿದ್ದು, ಸಂಪುಟ ಪುನರ್ ರಚನೆಯ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲ ರಾಜಕೀಯ ಪಂಡಿತರು ಇದನ್ನ ಬೀಳ್ಕೊಡುಗೆಯ ಔತಣಕೂಟ ಎಂದೂ ಬಣ್ಣಿಸಿದ್ದಾರೆ.
ಹೌದು… 15 ರಿಂದ 20 ಶಾಸಕರಿಗೆ ಕೋಕ್ ಕೊಡಲು ನಿರ್ಧರಿಸಿರುವ ಕೈ ಹೈಕಮಾಂಡ್ ಯುವ ನಾಯಕರಿಗೆ ಮಣೆ ಹಾಕುವ ಬಗ್ಗೆ ಚಿಂತನೆ ನಡೆಸಿದಯಂತೆ. ಈ ಹಿನ್ನೆಯಲ್ಲಿ ಇದನ್ನ ಬೀಳ್ಕೊಡುಗೆ ಔತಣಕೂಟ ಎಂದು ಬಣ್ಣಿಸಿದ್ದಾರೆ. ಇನ್ನೂ ಕಾಂಗ್ರೆಸ್ ನಾಯಕರೆಲ್ಲಾ, ಸಂಪುಟ ಪುನಾರ್ ರಚನೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಯಾವ ಕ್ರಾಂತಿಯೂ ಇಲ್ಲ ಎಂದು ಸಾರಸಗಟಾಗಿ ತಳ್ಳಿ ಹಾಕುತ್ತಿದ್ದಾರೆ. ಆದರೆ, ಶಾಸಕ ಲಕ್ಷ್ಮಣ ಸವದಿ ಸೇರಿ ಹಲವು ಶಾಸಕರು ನವೆಂಬರ್ ಕ್ರಾಂತಿಯ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.