ನಿಮಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ!! ಮುನಿರತ್ನಗೆ ಕುಸುಮಾ ವಾರ್ನಿಂಗ್..!

ಬೆಂಗಳೂರು : ಗುತ್ತಿಗೆದಾರರನ್ನು ಮನೆಗೆ ಕರೆಸಿ ಅವರಿಗೆ ಲಂಚದ ಬೇಡಿಕೆ ಇಟ್ಟು, ಲಂಚ ಕೊಡುವುದಕ್ಕೆ ಆಗದಿದ್ದರೆ ನಿನ್ನ ಹೆಂಡ್ತಿ- ಮಕ್ಕಳನ್ನು ಮಂಚಕ್ಕೆ ಕಳುಹಿಸು ಎಂದ ಮಹಾಪುರುಷ ನೀವು. ನನ್ನ ಬಗ್ಗೆ ಮಾತಾಡ್ತೀರಾ? ಇದು ನಿಮಗೆ ಕೊನೆಯ ಎಚ್ಚರಿಕೆ, ಮತ್ತೆ ನಾಲಗೆ ಹರಿಯಬಿಟ್ರೆ ಕಾನೂನು ಹೋರಾಟ ಮಾಡ್ತೀನಿ ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಶಾಸಕ ಮುನಿರತ್ನಗೆ ಎಚ್ಚರಿಕೆ ನೀಡಿದ್ದಾರೆ.

ಶಾಸಕ ಮುನಿರತ್ನ ಆರೋಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ನಿಮಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಹೆಣ್ಣಿನ ಬಗ್ಗೆ ಯಾಕಿಷ್ಟು ತಾತ್ಸಾರ? ಯಾಕ್ರಿ, ಒಂದು ಹೆಣ್ಣಿನ ಬಗ್ಗೆ ಇಷ್ಟು ತುಚ್ಛವಾಗಿ ಮಾತನಾಡುತ್ತೀರಾ? ಈ ದೇಶದಲ್ಲಿ ಎರಡು ಬಾರಿ ಪ್ರಧಾನಿ ಆಗಿ ಆಡಳಿತ ನಡೆಸಿದ ಇಂದಿರಾ ಗಾಂಧಿ, ಪ್ರಪಂಚದಾದ್ಯಂತ ಬಾಹ್ಯಾಕಾಶದ ಕಡೆ ತಿರುಗಿ ನೋಡುವಂತೆ ಮಾಡಿದ ಕಲ್ಪನಾ ಚಾವ್ಹಾ ಎಲ್ಲರೂ ಹೆಣ್ಣು ಮಗಳೇ ಅಷ್ಟೆಲ್ಲ ಬೇಡ, ನಿಮ್ಮಂತವರಿಗೆ ಜನ್ಮ ನೀಡಿದವರು, ನೀವು ಜನ್ಮ ನೀಡಿರುವುದು ಸಹ ಇಬ್ಬರು ಹೆಣ್ಣು ಮಕ್ಕಳಿವೆ ಎಂಬುದು ನೆನಪಿರಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಹೆಣ್ಣನ್ನು ಯಾವ ಭಾವನೆಯೊಂದ ನೋಡುತ್ತೀರಾ ಎಂಬ ನಿಮ್ಮ ನುಡಿ ಮುತ್ತುಗಳನ್ನು ಇಡೀ ರಾಜ್ಯದ ಜನ ಕೇಳಿಸಿಕೊಂಡಿದ್ದಾರೆ. ಕೆಲಸ ಮಾಡುವುದಕ್ಕೆ ರಾಜಕಾರಣದಲ್ಲಿ ನಿಮಗೆ ಅವಕಾಶ ಸಿಕ್ಕಿದೆ. ರಸ್ತೆ ಗುಂಡಿ ಮುಚ್ಚಿ ಎಂದರೆ ಎಂಜಿನಿಯರ್‌ಗಳನ್ನು ಕರೆದು ಗುಂಡಿ ಮುಚ್ಚ ಬಾರದು. ಜನರು ಹೇಗಾದರೂ ಸಾಯಲಿ, ಸರ್ಕಾರಕ್ಕೆ, ಸಚಿವರಿಗೆ ಕೆಟ್ಟ ಹೆಸರು ಬರಬೇಕು. ಗುಂಡಿ ಮುಚ್ಚುವುದಕ್ಕೆ ಬಿಡದ ನೀವು, ಇವತ್ತು ಅಭಿವೃದ್ಧಿ ಬಗ್ಗೆ ನಿಮ್ಮನ್ನು ಕಡೆಗಣಿಸುವುದರ ಬಗ್ಗೆ ಮಾತನಾಡುತ್ತೀರಿ ಎಂದು ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದ್ರು.

Leave a Reply

Your email address will not be published. Required fields are marked *