ಬೆಂಗಳೂರು : ಟನಲ್ ರೋಡ್ ನಿರ್ಮಾಣಕ್ಕೆ ಲಾಲ್ಬಾಗ್ನಲ್ಲಿ 6 ಎಕರೆ ಅಲ್ಲ 6 ಇಂಚು ಜಾಗವನ್ನೂ ಕೊಡೋಕೆ ಬಿಡುವುದಿಲ್ಲ. ಈ ಬಗ್ಗೆ ಉಗ್ರ ಹೋರಾಟ ಮಾಡುತ್ತೇವೆ ಅಂತಾ ಸಂಸದ ತೇಜಸ್ವಿ ಸೂರ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರನ್ನ ದುರಂತಕ್ಕೀಡು ಮಾಡುವ ಪ್ರಾಜೆಕ್ಟ್ ಇದು. ರಾಜ್ಯ ಸರ್ಕಾರ ಟನಲ್ ರೋಡ್ ಮಾಡೋಕೆ ಹೊರಟಿರುವುದು ಜನರಿಗಾಗಿ ಅಲ್ಲ. ಈ ಟನಲ್ ರೋಡ್ ಕಾರ್ ಇಟ್ಟುಕೊಂಡವರಿಗೆ ಮಾತ್ರ. ಅಂತವರಿಗಾಗಿ ಲಾಲ್ಬಾಗ್ನಲ್ಲಿ 6 ಎಕರೆ ಜಮೀನು ಭೂಸ್ವಾಧೀನ ಮಾಡಿದ್ದಾರೆ. 300 ವರ್ಷ ಇತಿಹಾಸ ಇರುವ ಬಂಡೆ ಲಾಲ್ಬಾಗ್ನಲ್ಲಿದೆ. ಜಿಬಿಐ ಅಧಿಕಾರಿಗಳಿಗೆ ಅಲೈನ್ ಮೆಂಟ್ ತೋರ್ಸಿ ಅಂದರೆ ಓಡಿ ಹೋದರು. ಸಾರ್ವಜನಿಕರ ಅಭಿಪ್ರಾಯವನ್ನೂ ಕೇಳಿಲ್ಲ. ಲಾಲ್ ಬಾಗ್‌ನಲ್ಲಿ ಕಮರ್ಷಿಯಲ್ ಕಟ್ಟಬೇಕಾ? 300 ವರ್ಷ ಹಳೇ ಬಂಡೆ ಇರುವ ಈ ಜಾಗ ದೇಶದ ಆಸ್ತಿ. ಇದನ್ನು ಒಡೆದು ರಿಯಲ್ ಎಸ್ಟೇಟ್ ಮಾಡುತ್ತೇವೆ ಅಂದ್ರೆ ಅದಕ್ಕೆ ನಾವು ಒಪ್ಪುವುದಿಲ್ಲ ಎಂದರು.
ಇನ್ನು ಈ ಟನಲ್ ರೋಡ್ ಅವೈಜ್ಞಾನಿಕವಾದದ್ದು. ಲಾಲ್ ಬಾಗ್ ಬೆಂಗಳೂರಿನ ಹೆಮ್ಮೆ. ಲಾಲ್ ಬಾಗ್ ಅನ್ನು ಹಾಳು ಮಾಡುವಂತಹ ಕೆಲಸ ಮಾಡೋಕೆ ಕಾಂಗ್ರೆಸ್ ಸರ್ಕಾರ ಹೊರಟಿದೆ. ನಾವು ಯಾವುದೇ ಕಾರಣಕ್ಕೂ ಟನಲ್ ರೋಡ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಟನಲ್‌ರೋಡ್ ವಿರುದ್ಧ ಹೈ ಕೋರ್ಟ್‌ನಲ್ಲಿ ಎರಡು ಪಿಐಎಲ್ ಹಾಕಿದ್ದೇವೆ. ಟನಲ್ ರೋಡ್ ವಿಚಾರವಾಗಿ ಹೈಕೋರ್ಟ್ ನಲ್ಲಿ ನಾನೇ ವಾದ ಮಾಡುತ್ತೇನೆ. ಲಾಲ್ ಬಾಗ್‌ನಲ್ಲಿ 6 ಎಕರೆ ಅಲ್ಲ 6 ಇಂಚು ಕೂಡ ಬಿಡುವುದಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕರೆಲ್ಲಾ ಈ ವಾರದಲ್ಲಿ ಲಾಲ್ ಬಾಗ್ಗೆ ಬರುತ್ತಾರೆ, ಟನಲ್ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡುತ್ತಾರೆ. ಟನಲ್ ನಿರ್ಮಾಣಕ್ಕೆ ನಾವು ಯಾವುದೇ ಕಾರಣಕ್ಕು ಬಿಡುವುದಿಲ್ಲ ಎಂದು ತೇಜಸ್ವಿ ಸೂರ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ರು.