ಜಾತಿಗಣತಿಗೆ ಮಾಹಿತಿ ನೀಡಲ್ಲ ಎಂದ ಸುಧಾ ಮೂರ್ತಿಗೆ ಪ್ರದೀಪ್ ಈಶ್ವರ್ ಕೌಂಟರ್..!

ಬೆಂಗಳೂರು : ಜಾತಿಗಣತಿಗೆ ಮಾಹಿತಿ ನೀಡಲು ನಿರಾಕರಿಸಿದ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರಿಗೆ ಶಾಸಕ ಪ್ರದೀಪ್ ಈಶ್ವರ್ ಕೌಂಟರ್ ಕೊಟ್ಟಿದ್ದಾರೆ.

ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸುಧಾ ಮೂರ್ತಿ ಅವರು ಬಿಜೆಪಿಯಲ್ಲಿ ರಾಜ್ಯಸಭಾ ಸಂಸದರಾದ ಮಾತ್ರಕ್ಕೆ ಇಂತಹದ್ದಕ್ಕೆ ಮಾಹಿತಿ ಕೊಟ್ಟರೆ ತಪ್ಪೇನು? ಮಾಹಿತಿ ಕೊಡಬಾರದು ಎಂದೇನೂ ಹೇಳಿಲ್ಲ. ಹಿಂದುಳಿದ ವರ್ಗದವರು ಸಮೀಕ್ಷೆಗೆ ತೆರಳಿರುವುದು ಒಂದು ಏಜೆನ್ಸಿ ಅಷ್ಟೇ. ಮೇಡಂ ಅವರು ಹಿಂದುಳಿದ ವರ್ಗದವರು ಸಮೀಕ್ಷೆ ಮಾಡ್ತೀವಿ ಅಂತಾ, ಮುಂದುವರೆದವರು ಮಾಹಿತಿ ಕೊಡಲ್ಲ ಎಂದರೆ ಹೇಗೆ? ಮುಂದುವರೆದವರು ಪೂಜೆ ಮಾಡುತ್ತಾರೆ ಅಂತಾ ಹಿಂದುಳಿದವರು ಅಂತಹ ದೇವಸ್ಥಾನಕ್ಕೆ ಹೋಗಲ್ಲ ಎಂದರೆ ಆಗುತ್ತದೆಯಾ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಸುಧಾಮೂರ್ತಿ ಮೇಡಂ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಸಮೀಕ್ಷೆ ವೇಳೆ ಅವರು ನೀಡಿದ ಪ್ರತಿಕ್ರಿಯೆಯಿಂದ ಬೇಸರವಾಗಿದೆ. ನಾವು ಈ ಸಮೀಕ್ಷೆಯನ್ನು ಯಾವತ್ತೂ ಹಿಂದುಳಿದ ವರ್ಗದವರಿಗೆ ಎಂದು ಹೇಳಿಲ್ಲ. ಕರ್ನಾಟಕ ಜನರಿಗೆ ಮಾಡುತ್ತಿರುವ ಸಮೀಕ್ಷೆ ಎಂದು ಹೇಳಿದ್ದೇವೆ. ಸುಧಾ ಮೂರ್ತಿ ಕರ್ನಾಟಕದ ಭಾಗವಾಗಿದ್ದಾರೆ. ನೀವು ಹಿಂದುಳಿದ ವರ್ಗದವರು ಆಗದೇ, ಮುಂದುವರೆದವರು ಆಗಿದ್ದರೆ, ನೀವು ಶ್ರೀಮಂತರು, ನಿಮ್ಮ ಆಸ್ತಿ ಇಷ್ಟಿದೆ ಎಂಬುದನ್ನು ಮಾಹಿತಿ ಕೊಟ್ಟರೆ ನಮ್ಮ ಸರ್ಕಾರದಿಂದ ಮುಂದುವರೆದವರು ಇಷ್ಟು ಜನರಿದ್ದಾರೆ ಎಂದು ಹೇಳಲಾಗುತ್ತದೆ. ಇನ್ನು ನೀವು ಉದದ್ಯೋಗಸ್ಥರಾ? ಉದ್ಯೋಗ ಕೊಟ್ಟಿದ್ದೀರಾ? ಎಂಬ ಮಾಹಿತಿ ಕಲೆಹಾಕಲಾಗುತ್ತದೆ. ಇಲ್ಲಿ ಹಿಂದುಳಿದವರು ಮಾಡ್ತಾರಂತಾ ಮುಂದುವರೆದವರು ಅದನ್ನು ಸ್ವೀಕರಿಸುತ್ತಿಲ್ಲ. ಇದು ಏನು ಪಕ್ಷಪಾತ ಅಲ್ಲವಾ? ನೀವು ಶಿಕ್ಷಣವಂತರಾಗಿ ಮಾಹಿತಿ ಕೊಡಬೇಕಿತ್ತು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *