ನೀನು ನಿಲ್ಲಿಸೋ ವರೆಗೂ, ನಾನು ನಿಲ್ಸಲ್ಲ ಮಗನೇ…

ಬೆಂಗಳೂರು : ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಪ್ರದೀಪ್ ಈಶ್ವರ್ ನಡುವೆ ವಾಕ್ಸಮರ ತಾರಕಕ್ಕೇರಿದೆ. ಬೆಂಗಳೂರಿನಲ್ಲಿ ವಾಗ್ದಾಳಿ ನಡೆಸಿರುವ ಶಾಸಕ ಪ್ರದೀಪ್ ಈಶ್ವರ್, ಮೈಸೂರು ಮಾಜಿ ಸಂಸದ ನನ್ನ ತಾಯಿಗೆ ಅವಮಾನ ಮಾಡಿದ್ದಾರೆ. ನಮ್ಮ ತಾಯಿ‌ ಸ್ವರ್ಗದಲ್ಲಿದ್ದಾರೆ, ನೀನು ಅಲ್ಲಿಗೆ ಹೋಗಿ ಕ್ಷಮೆ ಕೇಳಬೇಡ. ಮೈಸೂರಿನಲ್ಲೇ ಚಾಮುಂಡಿ ತಾಯಿ ದೇವಸ್ಥಾನ ಇದೆ, ಅಲ್ಲಿಗೆ ಹೋಗಿ ಕ್ಷಮೆ ಕೇಳು ಇಲ್ಲ ಅಂದ್ರೆ ನಿಮ್ಮ ಮನೆಯಲ್ಲಿ ಸೀತಾದೇವಿ ಫೋಟೋ ಇದ್ರೆ ಅಲ್ಲಿಯೇ ಕ್ಷಮೆ ಕೇಳು. ನನ್ನ ತಾಯಿ ಕ್ಷಮಿಸಿದರೂ ಕ್ಷಮಿಸಬಹುದು ಆದ್ರೆ ನಾನು ಎಂದೂ ಕ್ಷಮಿಸುವುದಿಲ್ಲ ಎಂದು ಕೌಂಟರ್‌ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಾಪ್‌ ಸಿಂಹ ಪ್ರಿಯಾಂಕ್ ಖರ್ಗೆ ಹಾಗೂ ನನ್ನ ಬಗ್ಗೆ ಏನೇನೋ ಮಾತನ್ನಾಡ್ತಾರೆ. ಅಪ್ಪನ ಬಗ್ಗೆ ಮಾತನ್ನಾಡ್ತಾರೆ, ನೀನು ತ್ರಿಪುರ ಸುಂದರನಾ ಗುರು? ನಾನು ಕತ್ತಲಲ್ಲಿ ಕಾಣಿಸೋದಿಲ್ವಂತೆ ಅಂದಿದ್ದಾನೆ, ಅದಕ್ಕೆ ನಾನು ಏನನ್ನೂ ಹೇಳಲಿಲ್ಲ. ಆ ಕತ್ತಲಲ್ಲಿ ನೀನು ಯಾಕಪ್ಪಾ ನನ್ನ ಹುಡಿಕಿದೆ. ನಿಮಗೆ ನಮ್ಮನ್ನು ಹುಡುಕವಷ್ಟು ಬರನಾ ಎಂದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾತನ್ನಾಡ್ತಿಯಾ? ಖರ್ಗೆಯವರ ವಯಸ್ಸು ಎಷ್ಟು ಅಂತಾ ಗೊತ್ತಾ? ಮುಸ್ಲೀಂ ಹೆಣ್ಣು ಮಕ್ಕಳ ಬಗ್ಗೆ ನೀನು, ಆ ಯತ್ನಾಳ್ ಏನೆಲ್ಲಾ ಮಾತನಾಡ್ತೀರಾ? ಸಿಟ್ಟು ಬರಲ್ವಾ ಇದಕ್ಕೆ. ಒಂದು ಕಮೆಂಟ್‌ಗೆ 60 ಪೈಸೆ ಕೊಟ್ಟು ಕಮೆಂಟ್‌ ಹಾಕಿಸ್ತಾನೆ. ನಮ್ಮ ವಿಡಿಯೋಗಳಲ್ಲಿ 500-600 ಪೇಯ್ಡ್ ಕಾಮೆಂಟ್ ಇರುತ್ತವೆ. ಆ ತರಹ ದರಿದ್ರ ನನಗೆ ಇಲ್ಲ ಗುರೂ. ಪಾರ್ಲಿಮೆಂಟ್ ಮೇಲೆ ಅಟ್ಯಾಕ್ ಆದಾಗ ಪ್ರಶ್ನೆ ಮಾಡೋದು ತಪ್ಪಾ ಎಂದು ಪ್ರತಾಪ್‌ ಸಿಂಹಗೆ ತಿರುಗೇಟು ನೀಡಿದ್ರು.

ಇನ್ನು ಮುಂದಿವರೆದು ಮಾತನಾಡಿದ ಅವರು, ಆರ್‌ಎಸ್‌ಎಸ್ ಬ್ಯಾನ್ ಮಾಡ್ತೇವೆ ಅಂತಾ ನಾವು ಹೇಳಿದ್ವಾ? ಆರ್‌ಎಸ್‌ಎಸ್ ನೋಂದಣಿ ಪ್ರತಿ ಎಲ್ಲಿ ಅಂತಾ ಕೇಳಿದ್ದೆವು, ಕೊಟ್ರಾ? ಇದೆನಾ ಆರ್‌ಎಸ್ಎಸ್ ನಿಮ್ಮಗೆ ಕಲಿಸಿ ಕೊಟ್ಟಿರೋದು? ಸಿಟಿ ರವಿ ಅಧಿವೇಶನದಲ್ಲಿ ಒಬ್ಬ ಮಹಿಳೆ ಜೊತೆ ಹೇಗೆ ನಡೆದುಕೊಂಡ್ರು? ಮಹಾರಾಷ್ಟ್ರಗೆ ಅನುದಾನ ಎಷ್ಡು ಹೋಯ್ತು? ಕರ್ನಾಟಕಕ್ಕೆ ಎಷ್ಟು ಅನುದಾನ ಬಂತು? ಅದನ್ನ ಪ್ರಶ್ನೆ ಮಾಡಿದ್ರೆ ನೀವು ಅದನ್ನೇ ಸಾಧನೆ ಅಂದುಕೊಳ್ತೀರಾ? ಸಿ.ಟಿ‌ ರವಿ, ಪ್ರತಾಪ್ ಸಿಂಹ ಆರ್‌ಎಸ್‌ಎಸ್ ನಿಂದ ಕಲಿತದ್ದು ಇದೇನಾ? ನಿಮ್ಮ ಅಪ್ಪ, ಅಮ್ಮ ಒಳ್ಳೆಯವರು ಗುರು, ಅವರು ಮಾಡಿದ್ದು ಕೆಟ್ಟ ಕೆಲಸ ಏನಂದ್ರೆ ನಿಂಗೆ ಜನ್ಮ ಕೊಟ್ಟಿರೋದು. ಕೂಡಲೇ ನಮ್ಮ ತಾಯಿಗೆ ಕ್ಷಮೆ ಕೇಳು. ನಾಳೆ ಮಾಧ್ಯಮಗೋಷ್ಠಿ ಮಾಡ್ತೀಯಾ ಮಗನೇ ಮಾಡು. ನಾನು ಕರೆಯುತ್ತೇನೆ. ನೀನು ನಿಲ್ಲಿಸೋವರೆಗೂ ನಾನು ನಿಲ್ಲಿಸಲ್ಲ. ನಿನ್ನ ನಾಲಿಗೆ ಹಿಡಿತದಲ್ಲಿರಲಿ ಮಿಸ್ಟರ್ ಪ್ರತಾಪ್ ಸಿಂಹ ಎಂದು ಆಕ್ರೋಶ ಹೊರಹಾಕಿದ್ರು.

Leave a Reply

Your email address will not be published. Required fields are marked *