ಕಾಂತಾರಾ-1 ಭಾರಿ ದುಡ್ಡು ಮಾಡಿದೆಯಂತೆ, ಬಿಡುವು ಮಾಡ್ಕೊಂಡು ಹೋಗಿ ನೋಡ್ತೀನಿ: ಸಿದ್ದು

ಮೈಸೂರು : ರಿಷಬ್ ಶೆಟ್ಟಿ ನಟಸಿ ನಿರ್ದೇಶನ ಮಾಡಿರುವ ಕಾಂತಾರಾ ಚಾಪ್ಟರ್-1(Kantara chapter-1) ಸಿನಿಮಾ ಚಿತ್ರರಂಗದ ಇತಿಹಾಸದಲ್ಲಿ ಹಲವು ದಾಖಲೆಗಳನ್ನ ಬರೆದಿದೆ. ಸದ್ಯ ₹800 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಇನ್ನೂ ಪ್ರದರ್ಶನ ಕಾಣುತ್ತಿದೆ. ದೇಶ ವಿದೇಶಗಳಲ್ಲಿ ಕಾಂತಾರಾ-1 ಸಿನಿಮಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು 2018 ಮತ್ತು 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, (Kantara chapter-1) ಕಾಂತಾರಾ ಚಾಪ್ಟರ್-1 ಸಿನಿಮಾ ನೋಡುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಯದ ಅಭಾವದಿಂದ ಕಾಂತಾರ (Kantara chapter-1) ಸಿನಿಮಾ ಇನ್ನೂ ನೋಡಲು ಸಾಧ್ಯವಾಗಿಲ್ಲ. ಕಾಂತಾರಾ ಸಿನಿಮಾ ಚೆನ್ನಾಗಿದೆ ಅಂತ ಹೇಳುತ್ತಿದ್ದಾರೆ. ಜೊತೆಗೆ ಬಹಳ ದುಡ್ಡೂ ಕೂಡ ಗಳಿಸಿದೆಯಂತೆ. ಸಮಾಜದ ಮೇಲೆ ಪ್ರಭಾವ ಬೀರುತ್ತಿದೆ ಎಂದಿದ್ದಾರೆ. ಸಮಯ ಮಾಡಿಕೊಂಡು ಕಾಂತಾರಾ-1 ಸಿನಿಮಾ ನೋಡಿಯೇ ನೋಡುತ್ತೇನೆ ಎಂದರು.

ಇದನ್ನೂ ಓದಿ : ಬಿಹಾರ ಸಂಘಕ್ಕೆ ಬೆಂಗಳೂರಲ್ಲಿ ಜಾಗ: ಡಿಸಿಎಂ ಡಿಕೆಶಿ ಹೇಳಿಕೆಗೆ JDS ಕೆಂಡ
ಮೊದಲು ಕಡಿಮೆ ಸಂಖ್ಯೆಯ ನಟ, ನಟಿ, ನಿರ್ದೇಶಕರು, ನಿರ್ಮಾಪಕರು ಇದ್ದರು. ಈ ವೇಳೆ ಸಿನಿಮಾ ಬಿಡುಗಡೆ ಕೂಡ ಕಡಿಮೆ ಇರುತಿತ್ತು. ಹೀಗಾಗಿ ಬಿಡುಗಡೆಯಾಗುತ್ತಿದ್ದ ಬಹುತೇಕ ಸಿನಿಮಾಗಳನ್ನು ನೋಡುತ್ತಿದ್ದೇವು. ನಾನು ವಿದ್ಯಾರ್ಥಿಯಾಗಿದ್ದಾಗ ಪ್ರತಿ ದಿನ ಸಿನಿಮಾ ನೋಡುತ್ತಿದ್ದೆ. ಆದರೆ ಈಗ ಸಿನಿಮಾ ಹೆಚ್ಚಾಗಿದೆ. ಪ್ರತಿ ದಿನ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಹೀಗಾಗಿ ನಾನು ಸಿನಿಮಾ ನೋಡುವುದನ್ನೇ ಬಿಟ್ಟೆ. ಮೌಲ್ಯಯುತ, ಸಾಮಾಜಿಕ ಕಳಕಳಿ ಸಿನಿಮಾ ಕಡಮೆ ಆಗಿವೆ ಎಂದರು.

ಸದ್ಯದಲ್ಲೇ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ..!
ಬಿಜೆಪಿ ಸರ್ಕಾರ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ. ನಾವು ಎರಡು ವರ್ಷ ವಿಳಂಬ ಮಾಡಿದ್ದೇವು. ಕೆಲವೇ ದಿನಗಳಲ್ಲಿ ಶೀಘ್ರವಾಗಿ 2020 ಮತ್ತು 2021ನೇ ಚಲನ ಚಿತ್ರ ಪ್ರಶಸ್ತಿ ಪ್ರದಾನ ಮಾಡುತ್ತೇವೆ . ಇನ್ನೂ ಮುಂದೆ ಆಯಾ ಆಯಾ ವರ್ಷದ್ದು ವರ್ಷವೇ ಪ್ರಶಸ್ತಿ ಪ್ರದಾನ ಮಾಡಿಯೇ ಮಾಡುತ್ತೇವೆ. ಆಯಾ ವರ್ಷದ ಪ್ರಶಸ್ತಿ ಪ್ರದಾನ ಆಯಾ ವರ್ಷವೇ ಮಾಡಿದರೆ ಪ್ರಶಸ್ತಿಗೆ ಒಂದು ಅರ್ಥ ಬರುತ್ತದೆ. ಇಲ್ಲದಿದ್ದರೆ ಪ್ರಶಸ್ತಿಗೆ ಅರ್ಥ ಬರಲ್ಲ. ಸೂಕ್ತ ಸಮಯದಲ್ಲಿ ಪ್ರಶಸ್ತಿ ನೀಡಿದರೆ ಅದಕ್ಕೆ ಗೌರವ ಹಾಗೂ ಬೆಲೆ. ಪ್ರಶಸ್ತಿ ಪ್ರದಾನ ಆದ ಮೇಲೆ ನನ್ನ ಮಾತು ಯಾರು ಕೇಳದೆ ಹೋಗಬಹುದು. ಹೀಗಾಗಿ ಮೊದಲು ನಾನು ಭಾಷಣ ಮಾಡಿ ನಂತರ ಪ್ರಶಸ್ತಿ ಪ್ರದಾನ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Leave a Reply

Your email address will not be published. Required fields are marked *