ಯತ್ನಾಳ್‌ರನ್ನ ಮರಳಿ BJPಗೆ ಕರೆ ತರುವುದೇ ನನ್ನ ಅಜೆಂಡಾ; ರಮೇಶ್ ಜಾರಕಿಹೊಳಿ

ಬೆಳಗಾವಿ : ಬಿಜೆಪಿ ಉಚ್ಛಾಟಿತ ಶಾಸಕ (Basanagouda patil yathnal) ಬಸನಗೌಡ ಪಾಟೀಲ್ ಯತ್ನಾಳ್‌ರನ್ನ ಮರಳಿ ಬಿಜೆಪಿಗೆ ಕರೆ ತರುವುದೇ ನನ್ನ ಅಜೆಂಡಾ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಹಾರರೊಂದಿಗೆ ಮಾತನಾಡಿದ ಜಾರಕಿಹೊಳಿ, ನಾನು ಬಸನಗೌಡ ಪಾಟೀಲ್ ಯತ್ನಾಳ್ ವಾರಕ್ಕೊಮ್ಮೆ ಭೇಟಿಯಾಗುತ್ತೇವೆ. ಮೊನ್ನೆ ಮಾಧ್ಯಮದಲ್ಲಿ ‌ಭೇಟಿ ವಿಚಾರ ಚರ್ಚೆಗೆ ಬಂದಿದೆ. ಮೊದಲ ದಿನದಿಂದಲೂ ಯತ್ನಾಳ್‌ರನ್ನ ಬಿಜೆಪಿಗೆ ಮರಳಿ ಕರೆದುಕೊಂಡು ಬರಲು ಪ್ರಯತ್ನ ನಡೆದಿದೆ. ಯತ್ನಾಳ್‌ ಉಚ್ಚಾಟನೆ ಆದ ದಿನದಿಂದಲೇ ಸತತ ಪ್ರಯತ್ನ ಮಾಡುತ್ತಿದ್ದೇವೆ. ಹೈಕಮಾಂಡ್ ಬಿಹಾರ ಚುನಾವಣೆ, ಆರ್‌ಎಸ್‌ಎಸ್‌ ಶತಮಾನೋತ್ಸವದಲ್ಲಿ ಕಾರ್ಯನಿರತರಾಗಿದ್ದರು. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿ ನಾವು ಬಿಜೆಪಿಯಲ್ಲೇ ಮುಂದುವರಿಯುತ್ತೇವೆ ಎಂದರು.

ಇದನ್ನೂ ಓದಿ : ‘ಸಚಿವರಾಗುವ ಅರ್ಹತೆ ಬಹಳಷ್ಟು ಜನರಿಗಿದೆ: ಆದರೆ 34 ಜನಕ್ಕಷ್ಟೇ ಮಂತ್ರಿಯಾಗಲು ಅವಕಾಶ’
ಇನ್ನು ಯತ್ನಾಳ್ ಜೆಸಿಬಿ ಪಕ್ಷ ಕಟ್ಟುವ ಬಗ್ಗೆ ಪ್ರತಿಕ್ರಿಯಿಸಿ, ವಿಜಯೇಂದ್ರ ಮುಂದುರೆಸಿದರೆ ಪ್ರತಿ ಸಲವೂ ಯತ್ನಾಳ್ ಹಾಗೆ ಹೇಳುತ್ತಾರೆ, ನಾನು ಆ ಬಗ್ಗೆ ಏನೂ ಹೇಳುವುದಿಲ್ಲ. ಯತ್ನಾಳ್ ಉಚ್ಚಾಟನೆ ಆಗಿ 8 ತಿಂಗಳು ಆಗಿದೆ ಅವತ್ತಿನ ಯತ್ನಾಳರಿಗೂ ಇವತ್ತಿನ ಯತ್ನಾಳರಿಗೂ ತುಲನೆ ಮಾಡಿ. ಯತ್ನಾಳ ವಿಜಯೇಂದ್ರರನ್ನ ತುಲನೆ ಮಾಡಿ, ಇವತ್ತು ರಾಜ್ಯದಲ್ಲಿ ಲಿಂಗಾಯತ, ಹಿಂದೂ ಲೀಡರ್ ಆಗಿ ಯತ್ನಾಳ ಪರಿವರ್ತನೆ ಆಗಿದ್ದಾರೆ. ವಿಜಯೇಂದ್ರ ಕುಗ್ಗಿದ್ದು, ಯತ್ನಾಳ್ ಮೇಲಕ್ಕೆ ಹೋಗಿದ್ದಾರೆ, ಇದನ್ನು ಎಲ್ಲರೂ ಒಪ್ಪಲೇಬೇಕು.

ಯತ್ನಾಳ್ ಬೇರೆ ಪಕ್ಷ ಕಟ್ಟಿದ್ರೂ ನಾನು ಬಿಜೆಪಿಯಲ್ಲೇ ಇರ್ತೀನಿ..!
ಇನ್ನು ಯಡಿಯೂರಪ್ಪ ಅವರ ನಾಯಕತ್ವ ಪ್ರಶ್ನೆ ಮಾಡಲು ಸಾಧ್ಯವಿಲ್ಲ, ಆದರೆ ವಿಜಯೇಂದ್ರ ಅವರನ್ನು ಯಾಕೆ ರಾಜ್ಯಾಧ್ಯಕ್ಷ ಮಾಡಿದ್ದಾರೆ ನನಗೆ ಗೊತ್ತಿಲ್ಲ. ನಾವು ಯತ್ನಾಳ್ ಅವರನ್ನು ಕಳೆದುಕೊಳ್ಳಬಾರದು ಎಂದರು. ಯತ್ನಾಳ್ ಪಕ್ಷ ಕಟ್ಟಿದ್ರೆ ಎಷ್ಟು ಸೀಟು ಗೆಲ್ಲುತ್ತಾರೆ ಗೊತ್ತಿಲ್ಲ, ಆದರೆ ಬಿಜೆಪಿಯ ಹಿಂದೂ‌ ಮತಗಳಿಗೆ ಡ್ಯಾಮೆಜ್ ಆಗಲಿದೆ. ಇದೇ ಕಾರಣಕ್ಕೆ ಯತ್ನಾಳ್ ತಪ್ಪು ದಾರಿ ಹಿಡಿಯಬಾರದು ಅಂತ ಭೇಟಿ ಆಗುತ್ತೇನೆ. ಪಕ್ಷಕ್ಕೆ ಯಾರೂ ಅನಿವಾರ್ಯ ಅಲ್ಲ, ಪಕ್ಷ ಎಲ್ಲರಿಗಿಂತ ದೊಡ್ಡದು. ರಮೇಶ್ ಜಾರಕಿಹೊಳಿ‌ ಬರುತ್ತಾರೆ, ಹೋಗುತ್ತಾರೆ ಪಕ್ಷವೇ ದೊಡ್ಡದು ಎಂದರು. ಯತ್ನಾಳ್ ವ್ಯಕ್ತಿತ್ವ ಬೆಳೆದಂತೆ ಹೊಗಳು ಭಟ್ಟರು ಬೆಳೆಯುತ್ತಾರೆ. ಹೊಗಳು ಭಟ್ಟರಿಂದಾಗಿ ತಪ್ಪು ಹೆಜ್ಜೆ ಇಡಬಾರದು ಅನ್ನುವುದು ನನ್ನ ಉದ್ದೇಶ. ಯತ್ನಾಳ್ ಬೇರೆ ಪಕ್ಷ ಕಟ್ಟಿದರೂ ನಾನು ಮಾತ್ರ ಬಿಜೆಪಿಯಲ್ಲೇ ಇರುತ್ತೇನೆ ಎಂದರು.

Leave a Reply

Your email address will not be published. Required fields are marked *