ನೆಹರು ಮರಿ ಮೊಮ್ಮಗಳ ಹೆಸರಿಟ್ಕೊಂಡು RSS ಬ್ಯಾನ್ ಮಾಡೋಕೆ ಸಾಧ್ಯವಿಲ್ಲ ಪ್ರಿಯಾಂಕ್..!

ಮೈಸೂರು : ನೆಹರು ಮರಿ ಮೊಮ್ಮಗಳ ಹೆಸರು ಇಟ್ಕೊಂಡಿರೋ ನಿಮ್ಮ ಕೈಯಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡೋಕೆ ಸಾಧ್ಯವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಆರ್‌ಎಸ್‌ಎಸ್‌ ಬ್ಯಾನ್‌ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರೇ ಆರ್‌ಎಸ್‌ಎಸ್ ಬ್ಯಾನ್ ಮಾಡುವ ವಿಚಾರವನ್ನು ಮರೆತು ಬಿಡಿ. ನೆಹರು ಕೈಯಲ್ಲೇ ಆಗಿಲ್ಲ. ಇನ್ನೂ ನೆಹರು ಮರಿ ಮೊಮ್ಮಗಳ ಹೆಸರು ಇಟ್ಟುಕೊಂಡಿರುವ ನಿಮ್ಮ ಕೈಯಲ್ಲಿ ಇದು ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ 3 ತಿಂಗಳಿಗೊಮ್ಮೆ ಆರ್‌ಎಸ್‌ಎಸ್ ಬೈಯ್ದು ತಮ್ಮ ಅಸ್ತಿತ್ವ ತೋರಿಸುವ ಪ್ರಯತ್ನ ಮಾಡಿದ್ದಾರೆ ಅಷ್ಟೆ. ಎಮ್ಮೆ ಮೇಲೆ ಮಳೆ ಸುರಿದರೆ ಪ್ರಯೋಜನವಿಲ್ಲ. ಅದೇ ರೀತಿ ಪಿಯುಸಿ ಫೇಲ್ ಆಗಿರುವ ಪ್ರಿಯಾಂಕ್ ಖರ್ಗೆಗೆ ಎಷ್ಟೇ ಬುದ್ಧಿ ಹೇಳಿದರು ಅರ್ಥವಾಗಲ್ಲ. ಪ್ರಚಾರದ ಹುಚ್ಚು, ಗೀಳು ಜಾಸ್ತಿಯಾಗಿ ಈ ರೀತಿ ಆಡ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಖರ್ಗೆ ಕುಟುಂಬ ಕಲಬುರಗಿಯನ್ನು ಕೊಚ್ಚೆ ಮಾಡಿದೆ. ಮೈಸೂರಲ್ಲಿ ಅತ್ಯಾಚಾರಕ್ಕೆ ಒಳಗಾದ ಹಕ್ಕಿ-ಪಕ್ಕಿ ಜನಾಂಗದ ಬಾಲಕಿ ಕಲಬುರಗಿ ಮೂಲದವರು. ಆ ಬಾಲಕಿ ಬಗ್ಗೆ ಪ್ರಿಯಾಂಕ್ ಧ್ವನಿ ಎತ್ತಿದ್ರಾ? ನಿಮ್ಮ ಕ್ಷೇತ್ರದ ಜನರಿಗೆ ಅಧಾರ್ ಕಾರ್ಡ್ ಕೊಡಿಸುವ ಯೋಗ್ಯತೆ ಇಲ್ಲ. ನೀವು ಆರ್‌ಎಸ್‌ಎಸ್ ಬಗ್ಗೆ ಮಾತಾಡ್ತೀರಾ? ಪಿಎಸ್‌ಐ ಹಗರಣ, ಬಿಟ್ ಕಾಯಿನ್ ಹಗರಣ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಿದ್ರಿ? ಈಗ ಅದನ್ನು ಸಾಬೀತು ಮಾಡಲು ಆಗ್ತಿಲ್ಲ ಆಕ್ರೋಶ ಹೊರಹಾಕಿದ್ದಾರೆ. ಪ್ರಿಯಾಂಕ್ ಪಿಯುಸಿ ಫೇಲ್ ಆಗಿ ಅನಿಮೇಷನ್ ಸರ್ಟಿಫಿಕೇಟ್ ಇಟ್ಟುಕೊಂಡು ಓಡಾಡುತ್ತಿದ್ದಾರೆ. ನೀವಂತೂ ಓದಿಲ್ಲ, ನಿಮ್ಮ ಕ್ಷೇತ್ರದ ಮಕ್ಕಳು ಓದುವಂತೆ ಮಾಡುವ ವಾತಾವರಣವನ್ನೂ ಸೃಷ್ಟಿ ಮಾಡ್ತಿಲ್ಲ. ನಿಮ್ಮ ಖಾತೆಯಲ್ಲಿ ಏನೂ ಕಡಿದು ಕಟ್ಟೆ ಹಾಕಿದ್ದೀರಾ ಹೇಳಿ ಎಂದು ವಾಗ್ದಾಳಿ ಮಾಡಿದ್ದಾರೆ.

Leave a Reply

Your email address will not be published. Required fields are marked *