‘ಸಚಿವರಾಗುವ ಅರ್ಹತೆ ಬಹಳಷ್ಟು ಜನರಿಗಿದೆ: ಆದರೆ 34 ಜನಕ್ಕಷ್ಟೇ ಮಂತ್ರಿಯಾಗಲು ಅವಕಾಶ’

ಬೆಳಗಾವಿ : ಕಾಂಗ್ರೆಸ್‌ ಪಕ್ಷದಲ್ಲಿ ಸಚಿವರಾಗುವ ಅರ್ಹತೆ ಬಹಳಷ್ಟು ಜನರಿಗಿದೆ. ಆದರೆ ಕೇವಲ 34 ಮಂದಿಗೆ ಮಾತ್ರ ಮಂತ್ರಿಯಾಗಲು ಅವಕಾಶವಿದೆ. ಇನ್ನು ಯಾರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು. ಯಾರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ಈ ಸಂಬಂಧ ನನ್ನ ಬಳಿ ಕೇಳಿದರೆ ನಾನೇನು ಹೇಳಲು ಸಾಧ್ಯವಿಲ್ಲ, ಅಧಿಕಾರವೂ ಇಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ ರಚನೆ ಆಗಬೇಕೆಂಬುದು ಚರ್ಚೆಯಲ್ಲಿದೆ. ಆದರೆ ಸಂಪುಟ ಪುನರ್​ರಚನೆ ಬಗ್ಗೆ ಹೈಕಮಾಂಡ್‌ ನಿರ್ಧರಿಸುತ್ತದೆ ಆ ಬಗ್ಗೆ ನಾನು ಏನೂ ಹೇಳಲು ಸಾಧ್ಯವಿಲ್ಲ. ದೆಹಲಿ ಮಟ್ಟದಲ್ಲಿ ಚರ್ಚೆ ಆಗಿದ್ದರೂ ಆಗಿರಬಹುದು. ಎಲ್ಲವೂ ಹೈಕಮಾಂಡ್ ತೀರ್ಮಾನದಂತೆ ನಡೆಯುತ್ತದೆ. ನಿನ್ನೆ ಸಿಎಂ ಸಿದ್ದರಾಮಯ್ಯ ಮೊದಲ ಬಾರಿ ಬಹಿರಂಗವಾಗಿ ಸಚಿವ ಸಂಪುಟ ಪುನಾರಚನೆ ಕುರಿತು ಹೇಳಿದ್ದಾರೆ ಎಂದರು, ಇನ್ನು ಸಚಿವ ಕೃಷ್ಣಭೈರೇಗೌಡ ಸಚಿವ ಸ್ಥಾನ ತ್ಯಾಗದ ಬಗ್ಗೆ ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಹೈಕಮಾಂಡ್‌ ಹೇಳಿದರೆ ನಾವು ಕೂಡ ಪಾಲನೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಎಂಎಲ್‌ಸಿ ಯತಿಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿ, ಯತಿಂದ್ರ ಅವರು ಸಿಎಂ ಸಿದ್ದರಾಮಯ್ಯ ನಂತರ ನಾನು ಅಹಿಂದ ಸಂಘಟನೆಯನ್ನು ಮುನ್ನಡೆಸುತ್ತೇನೆಂದು ಹೇಳಿದ್ದಾರೆ ಅಷ್ಟೇ, ಅದು ನಿಜವೂ ಇದೆ. ಆದರೆ ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಮಾಧ್ಯಮದವರಿಗೆ ತಿಳಿಸಿದರು.

Leave a Reply

Your email address will not be published. Required fields are marked *