ತಾವೇನು ಚಿತ್ತಾಪುರದ ನಿಜಾಮನಾ? ಈ ತುರ್ತು ಪರಿಸ್ಥಿತಿ ಆಟ ಜಾಸ್ತಿ ದಿನ ನಡೆಯಲ್ಲ

ಬೆಂಗಳೂರು : ಚಿತ್ತಾಪುರದಲ್ಲಿ ಆರ್​ಎಸ್​ಎಸ್​ ಬಾವುಟ ತೆರವಿಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದರುವ ವಿಪಕ್ಷ ನಾಯಕ ಆರ್​. ಅಶೋಕ್​, ಚಿತ್ತಾಪುರ ಭಾರತದಲ್ಲಿದೆಯೋ ಅಥವಾ ಖರ್ಗೆ ಕುಟುಂಬದ ರಿಪಬ್ಲಿಕ್ ಆಗಿದೆಯೋ? ತಾವೇನು ಚಿತ್ತಾಪುರದ ನಿಜಾಮನಾ ಎಂದು ಸಚಿವ ಪ್ರಿಯಾಂಕ್‌ ಖರ್ಗೆಗೆ ಪ್ರಶ್ನೆ ಮಾಡಿದ್ದಾರೆ.

ಆರ್ ಎಸ್ಎಸ್ ಪಥಸಂಚಲನಕ್ಕೆ ಪುರಸಭೆಯಿಂದ ಅನುಮತಿ ಪತ್ರ ಪಡೆಯಲಾಗಿದೆ. ಬ್ಯಾನರ್, ಧ್ವಜ ಕಟ್ಟಲು ಪುರಸಭೆಗೆ ಜಾಹೀರಾತು ತೆರಿಗೆ ಕಟ್ಟಿ ರಸೀದಿ ಪಡೆಯಲಾಗಿದೆ. ಇಷ್ಟಾದರೂ ರಾತ್ರೋ ರಾತ್ರಿ ಕೇಸರಿ ಬ್ಯಾನರ್, ಧ್ವಜಗಳನ್ನು ತೆರವುಗೊಳಿಸಿದ್ದೀರಲ್ಲ ಸಚಿವ ಪ್ರಿಯಾಂಕ್​ ಖರ್ಗೆ ಅವರೇ, ತಾವೇನು ಚಿತ್ತಾಪುರದ ನಿಜಾಮ ಅಂದುಕೊಂಡಿದ್ದೀರೋ ಅಥವಾ ರಜಾಕರ್ ಅಂದುಕೊಂಡಿದ್ದೀರೋ? ಎಂದು ಟ್ವೀಟ್​ನಲ್ಲೇ ಅಶೋಕ್ ಕಿಡಿಕಾರಿದ್ರು.

ಈ ತುರ್ತು ಪರಿಸ್ಥಿತಿಯ ಆಟ ಜಾಸ್ತಿ ದಿನ ನಡೆಯೋದಿಲ್ಲ. ಆರ್‌ಎಸ್ಎಸ್ ಬಗ್ಗೆ ವಿಷ ಕಾರಿದರೆ ನಕಲಿ ಗಾಂಧಿಗಳನ್ನು ಮೆಚ್ಚಿಸಿ ಏನೋ ಆಗಿ ಬಿಡಬಹುದು, ಚಿತ್ತಾಪುರ ರಿಪಬ್ಲಿಕ್ ಮಾಡಿಕೊಂಡು ಬಿಡಬಹುದು ಎಂಬ ಕನಸು ಕಾಣಬೇಡಿ. ಈ ತುರ್ತು ಪರಿಸ್ಥಿತಿ ಆಟ ಜಾಸ್ತಿ ದಿನ ನಡೆಯೋದಿಲ್ಲ ಎಂದು ಆರ್ ಅಶೋಕ್ ಟ್ವೀಟ್​ನಲ್ಲಿ ವಾರ್ನಿಂಗ್ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *