ಬೆಂಗಳೂರು : ನಮ್ಮ ಅಣ್ಣನನ್ನ ಸಿಎಂ ಮಾಡಬೇಕೆಂಬ ಆಸೆ ನನಗೂ ಇದೆ. ಆದ್ರೆ ಅವರ ಹಣೆಯಲ್ಲಿ ಬರೆದಿದ್ರೆ ಸಿಎಂ ಆಗ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರ ರಾಜ್ಯಕ್ಕೆ ಆಗಮನ ವಿಚಾರ ಗೊತ್ತಿಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಗಮನ ಹರಿಸ್ತಾರೆ. ಕಾಂಗ್ರೆಸ್ ಭನವಗಳ ಬಗ್ಗೆ ಪಕ್ಷದ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಮಾಹಿತಿ ನೀಡ್ತಾರೆ. ನವೆಂಬರ್ 15ರ ಕ್ರಾಂತಿಯ ಬಗ್ಗೆ ಮಾಹಿತಿ ಇಲ್ಲ. ನವೆಂಬರ್ ಅಂದ್ರೆ ನನಗೆ ನೆನಪಾಗೋದು ಕನ್ನಡ ರಾಜ್ಯೋತ್ಸವ, ಅದನ್ನ ಅದ್ದೂರಿಯಾಗಿ ಮಾಡೋಣ ಎಂದರು.
ಇದನ್ನೂ ಓದಿ : ಡಿಕೆಶಿ ಏನಾದ್ರೂ ಸಿಎಂ ಆದ್ರೆ ಕಾಂಗ್ರೆಸ್ ಕಚೇರಿಗಳಿಗೆ ದೊಡ್ಡ ಬೀಗ ಬೀಳುತ್ತೆ; ರಾಜಣ್ಣ ಸ್ಫೋಟಕ ಹೇಳಿಕೆ
ಇನ್ನು 95-98 ವಯಸ್ಸು ಆಗಿರುವವರೂ ಇನ್ನೂ ರಾಜಕೀಯದಲ್ಲಿ ಇದ್ದಾರೆ. ಸಿದ್ದರಾಮಯ್ಯನವರು ಸ್ಪರ್ಧೆ ಮಾಡಿದ್ರೆ ಒಳ್ಳೆಯದು. ರಾಜಣ್ಣ ಹಿರಿಯರಿದ್ದಾರೆ ಅವರ ಸಲಹೆ, ಅಭಿಪ್ರಾಯಗಳನ್ನು ವರಿಷ್ಠರಿಗೆ ತಿಳಿಸ್ತಾರೆ ಸ್ವಾಗತ. ಕಾಂಗ್ರೆಸ್ ಸರ್ಕಾರ 5 ವರ್ಷ ಇರಲಿ ಎಂದು ಜನತೆ 137 ಸ್ಥಾನ ನೀಡಿದ್ದಾರೆ.
ಸದ್ಯದ ವಿದ್ಯಮಾನಗಳಿಂದ ಆಡಳಿತದ ಮೇಲೆ ಪರಿಣಾಮ ವಿಚಾರವಾಗಿ, ನನಗೆ ಆಡಳಿತ ಮಾಡಿ ಅನುಭವ ಇಲ್ಲ. ಎಲ್ಲಾ ಸಂದರ್ಭದಲ್ಲಿ ಎಲ್ಲರನ್ನೂ ಸಂತೋಷ ಪಡಿಸಲು ಆಗಲ್ಲ. ನಾನು ಯಾವಾಗಲೂ ಎಣ್ಣೆ ಮೈಗೂ ಹಚ್ಚಿಕೊಳಲ್ಲ, ಮೈಗೂ ಹಾಕೊಳಲ್ಲ ಎಂದು ತಿಳಿಸಿದರು.
ಇನ್ನು ಹೆಚ್ಚುವರಿ ಡಿಸಿಎಂಗಳ ನೇಮಕ ವಿಚಾರವಾಗಿ, ಎಲ್ಲರ ಸಲಹೆಗಳನ್ನು ಹೈಕಮಾಂಡ್ ಗಮನಿಸುತ್ತದೆ, ನನ್ನ ಅಭಿಪ್ರಾಯ ಮುಖ್ಯವಾಗೊದಿಲ್ಲ. ಆರ್‌ಎಸ್‌ಎಸ್ ಪಥಸಂಚಲನದ ಬಗ್ಗೆ ಯಾರಿಗೂ ವಿರೋಧ ಇಲ್ಲ. ಆದರೆ ದೊಣ್ಣೆ ಹಿಡಿದು ಪಥಸಂಚಲನ ಮಾಡಿದ್ರೆ. ಇತರೆ ಸಮುದಾಯಗಳೂ ಅದೇ ರೀತಿ ಮಾಡಿದ್ರೆ? ಮೊದಲು ಚಡ್ಡಿ ಹಾಕಿಕೊಳ್ತಿದ್ರು, ಈಗ ಪ್ಯಾಂಟ್ ಹಾಕಿಕೊಳ್ತಿದ್ದಾರೆ ಎಂದರಲ್ಲದೇ ದಲಿತ ಸಿಎಂ ಚರ್ಚೆ ವಿಚಾರವಾಗಿ, ದಲಿತ ಸಿಎಂ ಚರ್ಚೆ ವಿಚಾರ ಸ್ವಾಗತ, ಸಮಾವೇಶ ಮಾಡೋದು ಒಳ್ಳೆಯದು ಎಂದು ಡಿ.ಕೆ.ಸುರೇಶ್ ಹೇಳಿದರು.