ಬೆಂಗಳೂರು : ಟನಲ್ ರೋಡ್ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಜಟಾಪಟಿ ತಾರಕಕ್ಕೇರಿದೆ. ಟನಲ್ ರಸ್ತೆ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕೆಲ ಟೆಕ್ನಿಕಲ್ ಪ್ರಶ್ನೆಗಳ ಹಾಕಿದ್ದು, ಇವುಗಳಿಗೆ ಉತ್ತರ ಕೊಡಿ ಎಂದು ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಟೆಕ್ನಿಕಲ್ ವಿಚಾರಗಳ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡಲ್ಲ. ವೈಯಕ್ತಿಕ ನಿಂದನೆ ಮಾಡುವ ಕೆಲಸ ಆಗುತ್ತಿದೆ. ಮದುವೆ ಆಗುತ್ತೇನೆಂದು ಕಾರು ಕೇಳಿಲ್ಲ. ಹಳೆಯ ಕಾರು ಒಂದು ಲಕ್ಷ ಕಿಲೋಮೀಟರ್ ಓಡಿದೆ. ಆ ಕಾರಣಕ್ಕಾಗಿ ನಾನು ಕ್ಷೇತ್ರದ ಕೆಲಸಕ್ಕೆ ಓಡಾಡಲು ಹೊಸ ಕಾರು ಕೇಳಿದ್ದೆ. ಕಾರ್‌ಗೆ ಎಲಿಜಿಬಿಲಿಟಿ ಮದುವೆ ವಿಚಾರ ಅಲ್ಲ. ಸಾಗರ್ ಖಂಡ್ರೆಯಂತ ಬ್ಯಾಚುಲರ್‌ಗೆ ಕೂಡ ಕಾರು ಕೊಟ್ಟಿದ್ದಾರೆ. ಕಾನೂನು ಪ್ರಕಾರ ಕೊಡಲು ಅವಕಾಶ ಇದೆ ಎಂದರು.
ಇದನ್ನೂ ಓದಿ : ತೇಜಸ್ವಿ ಸೂರ್ಯ ಪಾಪ ಬುದ್ಧಿವಂತ, ಫ್ಲೈಟ್ ಡೋರ್ ತೆಗೆದ ದೊಡ್ಡ ನಾಯಕ : ಡಿಕೆಶಿ ವ್ಯಂಗ್ಯ
ಇನ್ನು ಮುಂದುವರೆದು ಮಾತನಾಡಿದ ಅವರು, ಟನಲ್ ರಸ್ತೆಯಲ್ಲಿ ಎರಡು ಹಾಗೂ ಮೂರು ಚಕ್ರದ ವಾಹನಗಳಿಗೆ ಅವಕಾಶ ಇಲ್ಲ. ಇದು ಯಾವ ರೀತಿ ನ್ಯಾಯ, ಅವರು ಟ್ಯಾಕ್ಸ್ ಕಟ್ಟಲ್ವ. ಶ್ರೀಮಂತರಿಗೆ ಮಾತ್ರ ಟನಲ್ ರೋಡಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಟನಲ್ ರೋಡ್‌ನಲ್ಲಿ ಗಂಟೆಗೆ 1,800 ಜನ ಓಡಾಡಬಹುದು. ಆದರೆ, ಮೆಟ್ರೋ ಮಾಡಿದ್ರೆ 60 ಸಾವಿರ ಜನ ಓಡಾಡಬಹುದು. ಟನಲ್‌ನಿಂದ 20 ಕಂನ್ಜೆಕ್ಷನ್ ಪಾಯಿಂಟ್ ಆಗಬಹುದು ಅಂತ ವರದಿ ಇದೆ. ಸರ್ವೆಗಳಾಗದೇ ಟೆಂಡರ್ ಕರೆದಿದ್ದೀರಾ? ನಿಮ್ಮದೇ ಡಿಪಿಆರ್‌ನಲ್ಲಿ 2031ಕ್ಕೆ ಪೂರ್ಣಗೊಳ್ಳುತ್ತೆ ಅಂತ ಇದೆ. ಈಜೀಪುರ ಸೇತುವೆ ಗುಂಡಿಗಳನ್ನೇ ಹೇಳಿದ ಸಮಯಕ್ಕೆ ಮುಚ್ಚೋಕೆ ಆಗಿಲ್ಲ. ಡಿಪಿಆರ್ 2031ಕ್ಕೆ 12 ನಿಮಿಷ, 2041ಕ್ಕೆ 14 ನಿಮಿಷ ಉಳಿಯಲಿದೆ ಅಂತಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ರು.